Home ರಾಜಕೀಯ ಒಂದು ವರ್ಷದಲ್ಲಿ ವಿಧಾನಸಭೆ ಕಲಾಪ ನಡೆದಿದ್ದು ಕೇವಲ 25 ದಿನ!

ಒಂದು ವರ್ಷದಲ್ಲಿ ವಿಧಾನಸಭೆ ಕಲಾಪ ನಡೆದಿದ್ದು ಕೇವಲ 25 ದಿನ!

22
0
Karnataka assembly session Bengaluru CM and Siddaramaiah1

ಬೆಂಗಳೂರು:

ಕರ್ನಾಟಕ ವಿಧಾನಸಭೆಯ ಕಲಾಪ 2018 ಮತ್ತು 2023ರ ನಡುವೆ ಸರಾಸರಿ ಒಂದು ವರ್ಷಕ್ಕೆ ಕೇವಲ 25 ದಿನಗಳ ಕಾಲ ಮಾತ್ರ ನಡೆದಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಮಾಡಿದೆ.

ಫೆಬ್ರವರಿ-ಮಾರ್ಚ್ 2022ರ ಅವಧಿಯಲ್ಲಿ 26 ದಿನಗಳ ಕಾಲ ಅಧಿವೇಶನ ನಡೆದಿದ್ದು, ಇದೇ ಸುದೀರ್ಘ ಅಧಿವೇಶನವಾಗಿದೆ ಎಡಿಆರ್ ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ.

ಶಾಸಕರ ಕಾರ್ಯಕ್ಷಮತೆಯ ವಿಶ್ಲೇಷಣೆ(2018-23) ಒಟ್ಟು 150 ದಿನಗಳಲ್ಲಿ ಪಕ್ಷವಾರು ಹಾಜರಾತಿ ವಿಭಾಗದಲ್ಲಿ ಜೆಡಿಎಸ್ ಶಾಸಕರು 107 ದಿನಗಳು, ಕಾಂಗ್ರೆಸ್ ಶಾಸಕರು ಕನಿಷ್ಠ 95 ದಿನಗಳು ಹಾಜರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಬಿಜೆಪಿ ಸಚಿವ ಸುನೀಲ್ ಕುಮಾರ್ ಮತ್ತು ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯ ಶಾಸಕ ಆರ್ ಶಂಕರ್ ಅವರು ಕೇವಲ ನಾಲ್ಕು ದಿನ ಮಾತ್ರ ಹಾಜರಾಗಿದ್ದಾರೆ. 150 ದಿನಗಳಲ್ಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ 10 ದಿನ ಮತ್ತು ಬಿಜೆಪಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರು 15 ದಿನ ಹಾಜರಾತಿ ಹೊಂದಿದ್ದು, ಬೇಲೂರು ಶಾಸಕ ಕೆ.ಎಸ್.ಲಿಂಗೇಶ್, ಕಲಘಟಗಿ ಶಾಸಕ ಚನ್ನಪ್ಪ ಮಲ್ಲಪ್ಪ ನಿಂಬಣ್ಣನವರ್ ಪೂರ್ಣ ಹಾಜರಾತಿ ಹೊಂದಿದ್ದಾರೆ.

ಅತಿ ಹೆಚ್ಚು ಪ್ರಶ್ನೆಗಳನ್ನು(591) ಕೇಳಿದ ಶಾಸಕರ ಪಟ್ಟಿಯಲ್ಲಿ ಕಾಂಗ್ರೆಸ್ ಶಾಂತಿನಗರ ಶಾಸಕ ಎನ್ ಎ ಹರಿಸ್ ಅವರು ಅಗ್ರಸ್ಥಾನದಲ್ಲಿದ್ದು, ಕಾಂಗ್ರೆಸ್ ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ್(532) ಅವರು ನಂತರದ ಸ್ಥಾನದಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್‌ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಅವರು ವಿಧಾನಸಭೆಯಲ್ಲಿ ಒಂದೇ ಒಂದು ಪ್ರಶ್ನೆಯನ್ನೂ ಕೇಳಿಲ್ಲ ಎಂದು ವರದಿ ಹೇಳಿದೆ.

ವರದಿ ಬಿಡುಗಡೆ ಮಾಡಿ ಮಾತನಾಡಿದ ಎಡಿಆರ್‌ ಅಧ್ಯಕ್ಷ ಮತ್ತು ಸಂಸ್ಥಾಪಕ ಸದಸ್ಯ ಪ್ರೊ.ತ್ರಿಲೋಚನ್ ಶಾಸ್ತ್ರಿ ಅವರು, “ಅಧಿವೇಶನ ವರ್ಷದಲ್ಲಿ ಕೇವಲ 25 ದಿನಗಳು ಮಾತ್ರ ನಡೆದಿದ್ದು, ಶಾಸಕರು ಜನರ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here