ಬೆಂಗಳೂರು:
ಶುಕ್ರವಾರದಂದು ಕರ್ನಾಟಕ ಬಂದ್ ಇರುವ ಕಾರಣ ಸಾರ್ವಜನಿಕ ಸಂಪರ್ಕ ಸೇವೆಗಳು ಸಹ ಬಂದ್‍ಗೆ ಬೆಂಬಲ ಸೂಚಿಸಿರುವುದರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ (Bannerghatta Biological Park) ರಜೆ ಘೋಷಣೆ ಮಾಡಲಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೀಕ್ಷಣೆಗೆ ಬರುವವರಿಗೆ ಅನಾನೂಕುಲವಾಗುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ರಜೆ ಘೋಷಣೆ ಮಾಡಲಾಗಿದೆ.
ಆದ್ದರಿಂದ ಎಲ್ಲಾ ಘಟಕಗಳಾದ ಮೃಗಾಲಯ, ಸಿಂಹ, ಹುಲಿ, ಕರಡಿ, ಸಸ್ಯಹಾರಿ ಸಫಾರಿಗಳು ಮತ್ತು ಚಿಟ್ಟೆ ಉದ್ಯಾನವನ ಇತ್ಯಾದಿಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರುವುದಿಲ್ಲ.
ಆದರೆ ದಿನಾಂಕ: 03-10-2023 ರ ಮಂಗಳವಾರ ದಂದು ಪ್ರವಾಸಿಗರ ವೀಕ್ಷಣೆಗೆ ಅನುಕೂಲವಾಗುವಂತೆ ಉದ್ಯಾನವನದ ಮೃಗಾಲಯ, ಸಫಾರಿ ಮತ್ತು ಚಿಟ್ಟೆ ಉದ್ಯಾನವನ ಇವುಗಳನ್ನು ತೆರೆದಿಡಲಾಗುತ್ತದೆ. ಸಾರ್ವಜನಿಕರು ಈ ಬದಲಾವಣೆ ಹಾಗೂ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದಾಗಿದೆ.
(Disclaimer: The above press release comes to you under an arrangement with the Executive Director, Bannerghatta Biological Park. TheBengaluruLive takes no editorial responsibility for the same.)