ಬೆಂಗಳೂರು: ಕರ್ನಾಟಕ ಬ್ಯಾಂಕ್ ತನ್ನ ಡಿಜಿಟಲ್ ನವೀನತೆ ಮತ್ತು ತಂತ್ರಜ್ಞಾನ ಆಧಾರಿತ ಬ್ಯಾಂಕಿಂಗ್ ಕಾರ್ಯಕ್ಷಮತೆಗೆ ಮಾನ್ಯತೆ ಪಡೆದುಕೊಂಡು, ಭಾರತೀಯ ಬ್ಯಾಂಕ್ಗಳ ಸಂಘ (IBA) ಬ್ಯಾಂಕಿಂಗ್ ಟೆಕ್ನಾಲಜಿ ಅವಾರ್ಡ್ಸ್ನಲ್ಲಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
‘ಉತ್ತಮ ಫಿನ್ಟೆಕ್ ಮತ್ತು ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ (DPI) ಅಳವಡಿಕೆ’ ವಿಭಾಗದಲ್ಲಿ ವಿಜೇತ ಸ್ಥಾನ ಪಡೆದುಕೊಂಡಿರುವುದು, ಬ್ಯಾಂಕ್ನ ಡಿಜಿಟಲ್ ದೃಷ್ಟಿಕೋನ ಮತ್ತು ಫಿನ್ಟೆಕ್ ಆಧಾರಿತ ಪರಿಹಾರಗಳತ್ತ ಇರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಇದೇ ವೇಳೆ, ‘ಉತ್ತಮ ಟೆಕ್ ಟ್ಯಾಲೆಂಟ್’ ವಿಭಾಗದಲ್ಲಿ ರನ್ನರ್-ಅಪ್ ಸ್ಥಾನ ಪಡೆದುಕೊಂಡಿರುವ ಕರ್ನಾಟಕ ಬ್ಯಾಂಕ್,
ಉತ್ತಮ ತಂತ್ರಜ್ಞಾನ ಬ್ಯಾಂಕ್, ಉತ್ತಮ ಡಿಜಿಟಲ್ ಹಣಕಾಸು ಒಳಗೊಳ್ಳಿಕೆ ಮತ್ತು ಉತ್ತಮ ಡಿಜಿಟಲ್ ಮಾರಾಟ ವಿಭಾಗಗಳಲ್ಲಿ ವಿಶೇಷ ಪ್ರಶಂಸೆ (Special Mention)ಗೂ ಪಾತ್ರವಾಗಿದೆ.
ಈ ಸಾಧನೆ ಕುರಿತು ಮಾತನಾಡಿದ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಘವೇಂದ್ರ ಎಸ್. ಭಟ್,
ಈ ಗೌರವಗಳು ಬ್ಯಾಂಕ್ನ ಐಟಿ ಹಾಗೂ ವ್ಯವಹಾರ ತಂಡಗಳ ಸಂಯುಕ್ತ ಶ್ರಮದ ಫಲವೆಂದು ಹೇಳಿದರು.
“ಭಾರತೀಯ ಬ್ಯಾಂಕ್ಗಳ ಸಂಘದಿಂದ ದೊರೆತ ಈ ಗೌರವಗಳು ನಮ್ಮ ಡಿಜಿಟಲ್ ನವೀನತೆ, ತಂತ್ರಜ್ಞಾನ ಪ್ರತಿಭೆಗಳ ಪೋಷಣೆ ಮತ್ತು ಗ್ರಾಹಕ ಕೇಂದ್ರಿತ ಬ್ಯಾಂಕಿಂಗ್ ಪರಿಹಾರಗಳತ್ತ ಇರುವ ಬದ್ಧತೆಯನ್ನು ದೃಢಪಡಿಸುತ್ತವೆ,” ಎಂದು ಅವರು ಹೇಳಿದರು.
ಮುಂದುವರೆದು, ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ನೀಡುವಲ್ಲಿ ಕರ್ನಾಟಕ ಬ್ಯಾಂಕ್ ತನ್ನ ಡಿಜಿಟಲ್ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಐಬಿಎ ಬ್ಯಾಂಕಿಂಗ್ ಟೆಕ್ನಾಲಜಿ ಅವಾರ್ಡ್ಸ್ನಲ್ಲಿ ದೊರೆತ ಈ ಹಲವು ಗೌರವಗಳು, ಡಿಜಿಟಲ್ ಇನೋವೇಷನ್ ಮತ್ತು ತಂತ್ರಜ್ಞಾನಾಧಾರಿತ ಬೆಳವಣಿಗೆಯಲ್ಲಿ ಕರ್ನಾಟಕ ಬ್ಯಾಂಕ್ ಒಂದು ಮುಂದಾಳು ಸಂಸ್ಥೆಯಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿವೆ.
