ಕಲಬುರಗಿ:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರಿನಲ್ಲಿ ಕಮಲ ಅರಳಿದ್ದು ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಒಂದೇ ಒಂದು ಮತದಿಂದ ಗೆಲುವು ಸಾಧಿಸಿದ್ದಾರೆ.
ಇದೇ ಮೊದಲ ಬಾರಿಗೆ ಕಲಬುರಗಿಯಲ್ಲಿ ಬಿಜೆಪಿ ಸ್ವತಂತ್ರ್ಯವಾಗಿ ಗೆಲುವು ಸಾಧಿಸಿದೆ. ಮೇಯರ್ ಆಗಿ ಬಿಜೆಪಿಯ ವಿಶಾಲ್ ದರ್ಗಿ ಅವರು ಆಯ್ಕೆಯಾದರೆ ಉಪ ಮೇಯರ್ ಆಗಿ ಶಿವಾನಂದ್ ಪಿಸ್ತಿ ಆಯ್ಕೆಯಾಗಿದ್ದಾರೆ. ಈ ಮೂಲಕ 12 ವರ್ಷಗಳ ಬಳಿಕ ಬಿಜೆಪಿ ಕಲಬುರಗಿ ಪಾಲಿಕೆಯ ಗದ್ದುಗೆಗೇರಿದೆ.
Also Read: BJP wins Mayor, Deputy Mayor election in home district of Cong president Kharge
ಮೇಯರ್ ಚುನಾವಣೆಯಲ್ಲಿ #BJP ಅಭ್ಯರ್ಥಿ ವಿಶಾಲ ಧರ್ಗಿ ಪರ 33 & ಪ್ರತಿಸ್ಪರ್ಧಿ #INC ಅಭ್ಯರ್ಥಿ ಪ್ರಕಾಶ ಹೆಚ್. ಕಪನೂರ ಪರವಾಗಿ 32 ಹಾಗೂ ಉಪ ಮೇಯರ್ ಚುನಾವಣೆಯಲ್ಲಿ #BJP ಅಭ್ಯರ್ಥಿ ಶಿವಾನಂದ ಡಿ. ಪಿಸ್ತಿ ಪರವಾಗಿ 33 & ಕಾಂಗ್ರೇಸ್ ಬೆಂಬಲಿತ #JDS ಪಕ್ಷದ ಅಭ್ಯರ್ಥಿ ವಿಜಯಲಕ್ಷ್ಮೀ ರಮೇಶ ಸಿ. ಪರವಾಗಿ 32 ಮತ ಚಲಾವಣೆಗೊಂಡವು@CMofKarnataka
— DIPR-KALABURAGI (@Kalaburgivarthe) March 23, 2023
ವಿಶಾಲ್ ದರ್ಗಿ 33 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಕಪನೂರ್ ಮತಗಳನ್ನು ಪಡೆದಿದ್ದಾರೆ. ಇನ್ನು ಉಪಮೇಯರ್ ಸ್ಥಾನಕ್ಕೆ ಬಿಜೆಪಿಯ ಶಿವಾನಂದ್ ಪಿಸ್ತಿ 33 ಮತಗಳನ್ನು ಪಡೆದರೆ ಕಾಂಗ್ರೆಸ್ ನ ವಿಜಯಲಕ್ಷ್ಮಿ 32 ಮತಗಳನ್ನು ಪಡೆದಿದ್ದಾರೆ.
2021ರ ಸೆಪ್ಟೆಂಬರ್ ತಿಂಗಳಲ್ಲಿ ಕಲಬುರಗಿ ಪಾಲಿಕೆ ಚುನಾವಣೆ ನಡೆದಿತ್ತು. ಬಿಜೆಪಿ 23, ಕಾಂಗ್ರೆಸ್ 27, ಜೆಡಿಎಸ್ 4, ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು.