ಬೆಂಗಳೂರು:
ಕನ್ನಡದ ಖ್ಯಾತ ಲೇಖಕ ಹಾಗೂ ವಿಮರ್ಶಕ ಜಿ.ಹೆಚ್ ನಾಯಕ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಾಹಿತ್ಯದ ವಿಮರ್ಶೆ, ವಿಶ್ಲೇಷಣೆ ಹಾಗೂ ಬರಹಲೋಕದ ಅಪರೂಪದ ವ್ಯಕ್ತಿ. ಪ್ರಗತಿಪರ ಚಿಂತಕರು, ಸೌಜನ್ಯಶೀಲ, ನಿಷ್ಠುರ ವಿಮರ್ಶಕರಾದ ನಾಯಕ್ ಅವರು ಪೂರ್ವಾಗ್ರಹವಿಲ್ಲದ ಅಪ್ಪಟ ಮಾನವೀಯ ಮನಸ್ಸುಳ್ಳವರಾಗಿದ್ದರು. ನಾಯಕ್ ಅವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿ ಸಲ್ಲಿಸಿದ ಸೇವೆ ಅನನ್ಯ. ಹಂಪಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶ ಪ್ರಾಧ್ಯಾಪಕರಾಗಿಯೂ ಅವರ ಸೇವೆ ಗಮನಾರ್ಹವಾಗಿದೆ.
ಸಾಹಿತಿ ಜಿ.ಎಚ್.ನಾಯಕ್ ಅವರ ನಿಧನಕ್ಕೆ ಮುಖ್ಯಮಂತ್ರಿ @siddaramaiah ಅವರ ಶೋಕಸಂದೇಶ:
— CM of Karnataka (@CMofKarnataka) May 26, 2023
ಪ್ರಸಿದ್ದ ಸಾಹಿತಿ ಜಿ.ಎಚ್.ನಾಯಕ್ ಅವರ ಅಗಲಿಕೆ ನನಗೆ ಆಘಾತವನ್ನುಂಟು ಮಾಡಿದೆ.
ನನ್ನ ಆತ್ಮೀಯರು ಮತ್ತು ಹಿತಚಿಂತಕರಾಗಿದ್ದ ಜಿ.ಎಚ್.ನಾಯಕ್ ಬರವಣಿಗೆಯ ಜೊತೆಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳುವಳಿಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ಹೊಸ… pic.twitter.com/dHdEXXplxC
ಸಮಕಾಲೀನ, ಅನಿವಾರ್ಯ ನಿರಪೇಕ್ಷ ಸೇರಿದಂತೆ ಹಲವಾರು ವಿಮರ್ಶಾ ಕೃತಿಗಳು ಹಾಗೂ ಸಾಹಿತ್ಯ ಕೃತಿಗಳನ್ನು ಸಂಪಾದಿಸಿದ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಸಾಹಿತ್ಯ ವಿಮರ್ಶೆ ಪ್ರಶಸ್ತಿಯನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕದ ಪ್ರಖರ ಚಿಂತರಕೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳಿಗೆ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.