
Karnataka Chief Minister Siddaramaiah Launches WhatsApp Channel: Over 55,000 Subscribers
ಬೆಂಗಳೂರು:
ಕಳೆದ ವಾರ ವಾಟ್ಸ್‌ಆ್ಯಪ್ ಚಾನೆಲ್ ಎಂಬ ಹೊಸ ಆವಿಷ್ಕಾರವನ್ನು ವಾಟ್ಸ್ ಆಪ್ ಪರಿಚಯಿಸಿದ್ದು, ಸೆಪ್ಟೆಂಬರ್ 12 ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾನಲ್ ಆರಂಭಿಸಿ, ಈಗಾಗಲೇ 55,000ಕ್ಕೂ ಅಧಿಕ Subscribers ಹೊಂದಿದ್ದಾರೆ.
ಇಡೀ ದೇಶದ ಇತರೆ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ವಾಟ್ಸ್‌ಆ್ಯಪ್ ಚಾನಲ್ ಆರಂಭಿಸಿದವರಲ್ಲಿ ಸಿದ್ದರಾಮಯ್ಯ ಅವರು ಮೊದಲಿಗರು. ಜನರಿಗೆ ಬೆರಳ ತುದಿಯಲ್ಲಿ ಸರ್ಕಾರದ ದೈನಂದಿನ ಆಗುಹೋಗುಗಳ ಮಾಹಿತಿ ಒದಗಿಸಿ, ಆಡಳಿತವನ್ನು ಮತ್ತಷ್ಟು ಪಾರದರ್ಶಕವಾಗಿಸಲು Chief Minister of Karnataka ಎಂಬ ಹೆಸರಿನ ಚಾನಲ್ ಕಾರ್ಯಾರಂಭ ಮಾಡಿದೆ. ತಾವು ಕೂಡ ವಾಟ್ಸ್‌ಆ್ಯಪ್‌ನ ಚಾನಲ್ ಸೆಕ್ಷನ್ ನಲ್ಲಿ Chief Minister of Karnataka ಎಂದು ಸರ್ಚ್ ಮಾಡುವ ಮೂಲಕ ಮುಖ್ಯಮಂತ್ರಿಗಳ ಅಧಿಕೃತ ಚಾನಲ್ ಅನ್ನು Subscribe ಮಾಡಬಹುದಾಗಿದೆ ಎಂದು ಮುಖ್ಯಮಂತ್ರಿ ಸಚಿವಾಲಯ ಹೊರಡಿಸಿರುವ ಪತ್ರಿಕಾ ಹೇಳಿಕೆಯಲ್ಲಿ ಹೇಳಿದೆ.