Home ರಾಜಕೀಯ Karnataka CM Cauvery Residence | ಕಾವೇರಿ ನಿವಾಸಕ್ಕೆ 1.90 ಕೋಟಿ ಮೌಲ್ಯದ ಪೀಠೋಪಕರಣ; ಕಚೇರಿ...

Karnataka CM Cauvery Residence | ಕಾವೇರಿ ನಿವಾಸಕ್ಕೆ 1.90 ಕೋಟಿ ಮೌಲ್ಯದ ಪೀಠೋಪಕರಣ; ಕಚೇರಿ ಸಭಾಂಗಣಕ್ಕೆ 3 ಕೋಟಿ ರೂ. ಖರ್ಚು

42
0
HD Kumaraswamy
  • ಬರಗಾಲದಲ್ಲೂ ಸಿಎಂ ಶೋಕಿ; ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿ
  • ಇವರು ಸಮಾಜವಾದಿನಾ ಎಂದು ಪ್ರಶ್ನಿಸಿದ ಹೆಚ್ಡಿಕೆ

ಬೆಂಗಳೂರು:

ಒಂದೆಡೆ ರಾಜ್ಯ ತೀವ್ರ ಬರಗಾಲ, ವಿದ್ಯುತ್‌ ಕ್ಷಾಮದಿಂದ ಬಳಲುತ್ತಿದ್ದರೆ ಮುಖ್ಯಮಂತ್ರಿ ಮಾತ್ರ ಐಶಾರಾಮಿ ಜೀವನದ ಮೂಲಕ ಶೋಕಿ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಮುಖ್ಯಮಂತ್ರಿ ನಿವಾಸಕ್ಕೆ ಹೊಸದಾಗಿ ಕಾನ್ಫ್‌ʼರೆನ್ಸ್‌ ಹಾಲ್‌ ಮಾಡಿಕೊಂಡಿದ್ದಾರೆ. ಅದಕ್ಕೆ 3 ಕೋಟಿ ರೂ.ಗಳಷ್ಟು ಜನರ ದುಡ್ಡು ಖರ್ಚು ಮಾಡಿದ್ದಾರೆ. ಅದರ ಜತೆಗೆ, ಕಾವೇರಿ ನಿವಾಸಕ್ಕೆ 1.90 ಕೋಟಿ ರೂಪಾಯಿ ಬೆಲೆ ಬಾಳುವ ʼಸ್ಟ್ಯಾನ್ಲಿʼ ವಿದೇಶಿ ಬ್ರಾಂಡಿನ ಸೋಫಾ ಸೆಟ್‌ ಸೋಫಾ ಸೆಟ್‌, ಕಾಟ್‌ ಹಾಕಿಸಲಾಗಿದೆ. ಇದಕ್ಕೆ ಸರಕಾರದಿಂದ ಹಣ ನೀಡಲಾಗಿಲ್ಲ. ಹಾಗಾದರೆ, ಅದಕ್ಕೆ ಹಣ ಕೊಟ್ಟವರು ಯಾರು? ಇಂಥ ಐಶಾರಾಮಿ ಸೋಫಾ, ಕಾಟ್‌ʼಗಳನ್ನು ಬಳಸುವ ವ್ಯಕ್ತಿ ಸಮಾಜವಾದಿನಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ನನಗೆ ಬಂದಿರುವ ಮಾಹಿತಿ ಪ್ರಕಾರ ಯಾರೋ ಸಚಿವರೊಬ್ಬರ ಕಡೆಯವರು ಅದನ್ನೆಲ್ಲಾ ಮಾಡಿಸಿದ್ದಾರಂತೆ. ಇದೆನ್ನೆಲ್ಲಾ ನೋಡುತ್ತಿದ್ದರೆ ಇದು ಹ್ಯುಬ್ಲೆಟ್‌ ವಾಚ್‌ʼನ ಅಪ್ಡೇಟೆಡ್‌ ವರ್ಷನ್ ಥರಾ ಕಾಣುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.

ಸರಕಾರಕ್ಕೆ ಬರಕ್ಕಿಂತ ಕಾರುಗಳನ್ನು ಖರೀದಿ ಮಾಡಿಸಲಿಕ್ಕೆ, ಸಚಿವರ ನಿವಾಸಗಳನ್ನು ಡೆಕೋರೇಟ್‌ ಮಾಡೋದಕ್ಕೆ ಹಣ ಖರ್ಚು ಮಾಡುತ್ತಿದ್ದಾರೆ. ಬಡಪಾಯಿ ರೈತರಿಗೆ ಕೊಡಲಿಕ್ಕೆ ಇವರ ಬಳಿ ಹಣ ಇಲ್ಲ. ಮಂತ್ರಿಗಳ ಮನೆ ಸಿಂಗಾರಕ್ಕೆ ಹತ್ತು ಕೋಟು ರೂ. ಖರ್ಚು ಮಾಡುತ್ತಿದ್ದಾರೆ. ನಾನು ಈ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ಇಂಥ ಖರ್ಚಿಗೆ ಒಂದು ರೂಪಾಯಿ ಕೊಡ್ತಾ ಇರಲಿಲ್ಲ. ಒಂದು ಕಾರು ಖರೀದಿ ಮಾಡಲು ಬಿಡಲಿಲ್ಲ ನಾನು ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

LEAVE A REPLY

Please enter your comment!
Please enter your name here