Home ಬೆಂಗಳೂರು ನಗರ ಕರ್ನಾಟಕದಲ್ಲಿ ಜೂನ್ 14ರ ವರೆಗೆ ಲಾಕ್ ಡೌನ್ ವಿಸ್ತರಣೆ

ಕರ್ನಾಟಕದಲ್ಲಿ ಜೂನ್ 14ರ ವರೆಗೆ ಲಾಕ್ ಡೌನ್ ವಿಸ್ತರಣೆ

29
0

ಸಿಎಂ ಯಡಿಯೂರಪ್ಪ ಅವರಿಂದ ₹ 500 ಕೋಟಿ ಎರಡನೇ ವಿಶೇಷ ಪ್ಯಾಕೇಜ್ ಘೋಷಣೆ

ಬೆಂಗಳೂರು:

ಪ್ರಸ್ತುತ ಕೋವಿಡ್ ಸೋಂಕಿನ ಪ್ರಮಾಣ ಇಳಿಮುಖವಾಗಿದ್ದರೂ ಕೂಡ, ವೈರಾಣು ಹರಡುವಿಕೆ ಮುಂದುವರೆಯುವುದರಿಂದ ಮತ್ತು ಆರೋಗ್ಯ ಪರಿಣಿತರ ಸಲಹೆಯ ಮೇರೆಗೆ ಕರ್ನಾಟಕದಲ್ಲಿ ಜೂನ್ 14ರವರೆಗೆ ಲಾಕ್ ಡೌನ್ ವಿಸ್ತರಿಸಲು ನಿರ್ಧರಿಸಲಾಗಿದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.

ಈ ಹಿಂದೆ ಲಾಕ್ ಡೌನ್ ಜೂನ್ 7ರವರೆಗೆ ಜಾರಿಗೊಳಿಸಲಾಗಿತ್ತು. ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ₹ 500 ಕೋಟಿ ವಿಶೇಷ ಎರಡನೇ ಪ್ಯಾಕೇಜ್ ಘೋಷಿಸಿದ್ದಾರೆ.

ಹೋಟೆಲ್​ಗಳು ಸಂಜೆಯವರೆಗೂ ತೆರೆಯಬಹುದು. ಆದರೆ ಹೋಟೆಲ್​ಗಳಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದರು.

ಮಗ್ಗಗಳ ಕಾರ್ಮಿಕರು, ಚಲನಚಿತ್ರ, ದೂರದರ್ಶನ ಕಲಾವಿದರು ಮೀನುಗಾರ, ಅರ್ಚಕರು, ಅಡುಗೆ ಕೆಲಸಗಾರರು, ಆಶಾ ಕಾರ್ಯಕರ್ತೆಯರಿಗೂ ತಲಾ ₹3000, ಅಂಗನವಾಡಿ ಕಾರ್ಯಕರ್ತೆ, ಸಹಾಯಕರಿಗೆ ತಲಾ ₹2000,ಪ್ರಾಥಮಿಕ ಅನುದಾನರಹಿತ ಶಿಕ್ಷಕರಿಗೆ ತಲಾ 5000 ರೂ ಪ್ಯಾಕೇಜ್​ನ್ನು ಸಿಎಂ ಯಡಿಯೂರಪ್ಪ ಘೋಷಿಸಿದರು.

LEAVE A REPLY

Please enter your comment!
Please enter your name here