ಬೆಂಗಳೂರು :
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂಧನ ಸಪ್ತಾಹ ಕಾರ್ಯಕ್ರಮದ ತಮ್ಮ ಭಾಷಣದಲ್ಲಿ, ಭಾರತದ ನವೀಕರಿಸಬಹುದಾದ ಇಂಧನ ಬೆಳವಣಿಗೆಯಲ್ಲಿನ ಕೊಡುಗೆಗಾಗಿ ಟ್ರೂಆಲ್ಟ್ ಬಯೋಎನರ್ಜಿಯ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಎಂ ನಿರಾಣಿ ಅವರನ್ನು ಶ್ಲಾಘಿಸಿದರು.
ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶ ಕೇಂದ್ರದಲ್ಲಿ ಐಇಡಬ್ಲ್ಯು ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅತಿಗಣ್ಯರ ಸಮ್ಮುಖದಲ್ಲಿ ಈ ಮೆಚ್ಚುಗೆ ವ್ಯಕ್ತವಾಯಿತು.
ಟ್ರೂಆಲ್ಟ್ ಬಯೋಎನರ್ಜಿ ಅತ್ಯಲ್ಪ ಕಾಲದಲ್ಲಿ ಸಾಧಿಸಿರುವ ಪ್ರಗತಿ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರಿಂದ ಮೆಚ್ಚುಗೆಯ ಮಾತುಗಳು ನೆರೆದಿದ್ದ ಗಣ್ಯರ ಗಮನ ಸೆಳೆಯಿತು. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಶ್ರೀ ಮುರುಗೇಶ್ ಆರ್ ನಿರಾಣಿ ಅವರು, ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಮತ್ತು
ಗಣ್ಯರ ಸಮ್ಮುಖದಲ್ಲಿ ಅವರ ಪ್ರೇರಕ ಮಾತುಗಳಿಗಾಗಿ ಸಿಎಂ ಶ್ರೀ ಬಸವರಾಜ ಬೊಮ್ಮಾಯಿ ಜೀ ಅವರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಇಂಡಿಯಾ ಎನರ್ಜಿ ವೀಕ್-2023 ರಲ್ಲಿ ಅವರು ನನ್ನ ಮಗ ವಿಜಯ್ ಎಂ ನಿರಾಣಿ ಅವರು ಭಾರತದ ನವೀಕರಿಸಬಹುದಾದ ಇಂಧನ ಬೆಳವಣಿಗೆಯ ನೀಡಿದ ಕೊಡುಗೆಯನ್ನು ಒಪ್ಪಿಕೊಂಡು ಮೆಚ್ಚುಗೆ ಸೂಚಿಸಿರುವುದು ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಜಯ್ ನಿರಾಣಿ ಒಡೆತನದ ಟ್ರೂಆಲ್ಟ್ ಬಯೋಎನರ್ಜಿ 70,000ಕ್ಕೂ ಹೆಚ್ಚು ಉದ್ಯೋಗಿಗಳು, 3 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳು ಒಟ್ಟಾಗಿ ಜೈವಿಕ ಇಂಧನ ಉತ್ಪಾದನೆ ಹೆಚ್ಚಿಸುವ ವಿಷಯದಲ್ಲಿ ಬದಲಾವಣೆ ಮಾಡುತ್ತಿವೆ. ಆ ಮೂಲಕ ಪರಿಹಾರಕ್ಕೆ ಕೊಡುಗೆ ನೀಡುತ್ತಿವೆ ಎಂದು ಹೇಳಿದರು.
ಮಾನವಕುಲವು ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಹವಾಮಾನ ವೈಪರೀತ್ಯ ಒಂದಾಗಿದೆ.
ನಮ್ಮ ಮುಖ್ಯಮಂತ್ರಿಯವರ ಈ ಪ್ರಶಂಸೆಯ ಮಾತುಗಳು, ಟ್ರೂಆಲ್ಟ್ ಬಯೋ ಎನರ್ಜಿ ಮತ್ತು ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಗುರುತಿಸಿ ಜಾಗತಿಕ ಮಟ್ಟದಲ್ಲಿ ಬದಲಾವಣೆ ಮುಂದುವರೆಸಲು ವಿಜಯ್ ನಿರಾಣಿ ಅವರನ್ನು ಮತ್ತಷ್ಟು ಪ್ರೇರೇಪಿಸುತ್ತದೆ ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.
ಟ್ರೂಆಲ್ಟ್ ಬಯೋಎನರ್ಜಿ ಪ್ರಸ್ತುತ ಭಾರತದ ಅತಿದೊಡ್ಡ ಜೈವಿಕ ಇಂಧನ ಕಂಪನಿ ಮತ್ತು ಏಷ್ಯಾದ ಎಥೆನಾಲ್‍ನ ಅತಿದೊಡ್ಡ ಉತ್ಪಾದಕ ಕೇಂದ್ರವಾಗಿದೆ. ಪ್ರತಿದಿನ 2 ಮಿಲಿಯನ್ ಲೀಟರ್ ಎಥೆನಾಲ್ ಉತ್ಪಾದನಾ ಸಾಮಥ್ರ್ಯದೊಂದಿಗೆ, ಟ್ರೂಆಲ್ಟ್ ಬಯೋಎನರ್ಜಿ ಶೀಘ್ರದಲ್ಲೇ ಭಾರತದ ಒಟ್ಟು ಸಾಮಥ್ರ್ಯದ ಹೆಚ್ಚಿನ ಭಾಗಕ್ಕೆ ಕೊಡುಗೆ ನೀಡಲಿದೆ ಎಂದರು.
ಟ್ರೂಅಲ್ಟ್ ಕಂಪನಿಯನ್ನು ಅವಲಂಬಿತವಾಗಿರುವ 3 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳನ್ನು ಬೆಂಬಲಿಸುತ್ತದೆ. ಕಂಪನಿಯು ಭಾರತದ ಮೊದಲ ಜೈವಿಕ ಇಂಧನ ಕೇಂದ್ರವನ್ನು ಸ್ಥಾಪಿಸಿದೆ. ಅವರ ಎಥೆನಾಲ್ ಕಾರ್ಯಸೂಚಿಯನ್ನು ಮತ್ತಷ್ಟು ಹೆಚ್ಚಿಸಲು ವಾಹನ ತಯಾರಕರಲ್ಲಿ ವಿಶ್ವಾಸ ತುಂಬುತ್ತದೆ ಎಂದು ಹೇಳಿದರು.