ಬೆಂಗಳೂರು:
ರಾಜ್ಯದ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಿ ಜನರ ಪ್ರಾಣ ರಕ್ಷಿಸು ವುದು ನಮ್ಮ ಕರ್ತವ್ಯ. ಶಾಸಕರ ಪ್ರದೇಶಾಭಿವೃದ್ದಿಗೆ ನೀಡಲಾಗುವ ಹಣವನ್ನು ಕೋವಿಡ್ ಪರಿಹಾರ ನಿಧಿಗೆ ಸಮರ್ಪಿಸಲು ತೀರ್ಮಾನಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,ಅಂದಾಜು 100 ಕೋಟಿ ರೂ ಅನುದಾನವನ್ನು ನೀಡುತ್ತಿದ್ದು ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಮತಿ ನೀಡಬೇಕು.ನಾವಿದನ್ನು ಅತ್ಯಂತ ಪಾರದರ್ಶಕವಾಗಿ ನಿಭಾಯಿಸು ತ್ತೇವೆ.ಈ ಯೋಜನೆ ಅನುಷ್ಠಾನಕ್ಕೆ ನೀಲನಕ್ಷೆ ನೀಡುತ್ತೇವೆ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ರಾಜ್ಯದ ಜನರಿಗೆ ಲಸಿಕೆ ನೀಡುವಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯವನ್ನು ಪಕ್ಷದ ವತಿಯಿಂದ ಮಾಡಲು ತೀರ್ಮಾನಿಸಲಾಗಿದೆ.ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಮತಿ ನೀಡಬೇಕಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ.ಆತ್ಮನಿರ್ಭರ ಭಾರತದ ಮನೋಭಾವದಲ್ಲಿ ಉತ್ಪಾದಕರಿಂದ ಕಾಂಗ್ರೆಸ್ ನೇರವಾಗಿ ಲಸಿಕೆ ಖರೀದಿಸಿ,ಅದನ್ನು ಜನರಿಗೆ ವಿತರಿಸಲು ಅನುಮತಿ ನೀಡಬೇಕು ಎಂದು ನಾನು ಬಿ ಜೆಪಿ ಸರ್ಕಾರಗಳಲ್ಲಿ ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಲಸಿಕೆ ಅಭಿಯಾನ ಆರಂಭಿಸಲು ಕಾಂಗ್ರೆಸ್ 100 ಕೋಟಿ ರುಪಾಯಿ ಯೋಜನೆ ರೂಪಿಸಿದೆ.ಇದರಲ್ಲಿ 10 ಕೋಟಿಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನಿಧಿಯಿಂದ ನೀಡಲಾಗುವುದು.ಉಳಿದ 90 ಕೋಟಿ ಯನ್ನು ಕಾಂಗ್ರೆಸ್ ಶಾಸಕರು ಹಾಗೂ ಪರಿಷತ್ ಸದಸ್ಯರ ಕ್ಷೇತ್ರಾಭಿವೃದ್ಧಿ ನಿಧಿಯ ಮೂಲಕ ಸಂಗ್ರಹಿಸಲಾಗುವು ದು.ಉಪಮುಖ್ಯಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಲಸಿಕೆ ಪೂರೈಕೆಗೆ ಜಾಗತಿಕ ಟೆಂಡರ್ ಕರೆಯುತ್ತಿರುವು ದಾಗಿ ಹೇಳುತ್ತಿದ್ದಾರೆ.ಇದರಲ್ಲಿ ಎಲ್ಲವೂ ಪಾರದರ್ಶಕವಾಗಿರಬೇಕು. ಇಲ್ಲಿ ಯಾರಿಗೆ ಎಷ್ಟು ಪರ್ಸೆಂಟ್ ಎಂದು ಚರ್ಚೆ ನಡೆಯುತ್ತಿರುವುದು ನಮಗೆ ಗೊತ್ತಿದೆ.ಮುಖ್ಯಮಂತ್ರಿಗಳೇ ನಿಮ್ಮ ಗಮನಕ್ಕೆ ಬಾರದೇ ಈ ಕೆಲಸ ನಡೆಯು ತ್ತಿದೆ.ಜನರ ಹಣ ಲಪಟಾಯಿಸಿದರೆ ನಾವು ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚ ರಿಕೆ ನೀಡಿದರು.
18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡುವ ಬಗ್ಗೆ ನಿನ್ನೆ ಕೇಂದ್ರ ಸಚಿವ ಸದಾನಂದ ಗೌಡರು ನಾವೇನು ನೇಣು ಹಾಕಿಕೊಳ್ಳಬೇಕಾ ಅಂತಾ ಕೇಳುತ್ತಾರೆ? ಸದಾನಂದಗೌಡರೇ,ನೀವು ಕಾನೂನು ಸಚಿವ ರಾಗಿದ್ದವರು, ಮುಖ್ಯಮಂತ್ರಿಯಾಗಿದ್ದವರು.ನೀವು ನೇಣು ಹಾಕಿಕೊಳ್ಳಿ ಎಂದು ನಾವು ಹೇಳುವುದಿಲ್ಲ. ಆದರೆ ನೀವು ಲಸಿಕೆ ಕೊಡಲಿಲ್ಲ ಅಂತಾ ನಿಮಗೆ ಮತ ಹಾಕಿದವರು.ನೇಣು ಹಾಕಿಕೊಳ್ಳಬೇಕಾ? ಜನ ನಿಮ್ಮ ಮಾತಿಗೆ ನಗುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಲಸಿಕೆ ನೀಡದೇ ಗುಜರಾತಿಗೆ ನೀಡುತ್ತಿರುವಾಗ ನೀವೂ ಸೇರಿ ರಾಜ್ಯದ 25 ಸಂಸದರು ಬಾಯಿ ಮುಚ್ಚಿಕೊಂಡಿದ್ದೀರಿ.ಇದು ಸರಿಯೇ? ಎಂದು ಅವರನ್ನು ಪ್ರಶ್ನಿಸಿದರು.
ಇನ್ನು ಆಡಳಿತ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಗಳು ನ್ಯಾಯಾಧೀಶರು ಸರ್ವಜ್ಞರೇ ಎಂದು ಪ್ರಶ್ನಿಸಿದ್ದಾರೆ. ಇದು ನ್ಯಾಯಾಂಗ ನಿಂದನೆಯಾಗಿದೆ.ನ್ಯಾಯಾಲಯದ ತೀರ್ಪುಗಳನ್ನು ನೆಲದ ಕಾನೂನು ಎಂದು ಪರಿಗಣಿಸು ವಾಗ ಸಿ.ಟಿ. ರವಿ ಅವರು ಈ ರೀತಿ ಹೇಳಿರುವುದು ಅಪರಾಧ. ದಾರಿ ತಪ್ಪಿದಾಗ ಶಾಸಕಾಂಗವನ್ನು ಸರಿದಾರಿಗೆ ತರುವುದು ನ್ಯಾಯಾಂಗದ ಕರ್ತವ್ಯ.ನ್ಯಾಯಾಲಯಕ್ಕೆ ಅಗೌರವ ತಂದಿರುವುದು ಸರಿಯಲ್ಲ.ಇದಕ್ಕೆ ಮುಖ್ಯಮಂ ತ್ರಿಗಳು ಹಾಗೂ ಕಾನೂನು ಸಚಿವರು ಹೊಣೆ ಹೊರಬೇಕು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ.ಹೀಗಾಗಿ ನ್ಯಾಯಾಲಯಗಳು ಕೆಲಸ ಮಾಡುವಂತಾಗಿವೆ.ಈ ಪರಿಸ್ಥಿತಿಯಲ್ಲಿ ಮಾಧ್ಯ ಮಗಳ ಪಾತ್ರ ಕೂಡ ಬಹು ದೊಡ್ಡದಿದೆ ಎಂದು ಅವರು ಶ್ಲಾಘಿಸಿದರು.
ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಸತ್ತವರ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ ನೀಡಬೇಕು.ಇಂದಿ ರಾ ಕ್ಯಾಂಟೀನ್ ನಲ್ಲಿ ಗುರುತಿನ ಚೀಟಿ ಇಲ್ಲದೇ ಉಚಿತ ಆಹಾರ ನೀಡಲಾಗುವುದು ಅಂತಾ ಸರ್ಕಾರ ಹೇಳಿತ್ತು. ಆದರೆ ನಾವು ರಿಯಾಲಿಟಿ ಚೆಕ್ ಮಾಡಿದಾಗ ಗೊತ್ತಾಗಿದ್ದೇ ಬೇರೆ.ಒಬ್ಬ ವ್ಯಕ್ತಿ ಒಂದು ಊಟ ಪಡೆಯಲು ಸರ್ಕಾರ ಆತನ ಗುರುತಿನ ಚೀಟಿ ಕೇಳುತ್ತಿರುವುದು ದೇಶಕ್ಕೆ ನಾಚಿಕೆ ತರುವ ಕೆಲಸ.ಜನಸಾಮಾನ್ಯನ ಘನತೆಗೆ ಧಕ್ಕೆ ತರುವ ವಿಚಾರ ಎಂದು ಸರ್ಕಾರದ ಕ್ರಮವನ್ನು ಡಿ.ಕೆ.ಶಿವಕುಮಾರ್ ಖಂಡಿಸಿದರು.