Home ಬೆಂಗಳೂರು ನಗರ Karnataka Congress is Number one in corruption:Former Union Minister Sadananda Gowda |...

Karnataka Congress is Number one in corruption:Former Union Minister Sadananda Gowda | ಭ್ರಷ್ಟಾಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ನಂಬರ್ ಒನ್: ಮಾಜಿ ಕೇಂದ್ರ ಸಚಿವ ಸದಾನಂದಗೌಡ

44
0
Karnataka Congress is Number one in corruption | Former Union Minister Sadananda Gowda
Karnataka Congress is Number one in corruption | Former Union Minister Sadananda Gowda

ಬೆಂಗಳೂರು:

ಕರ್ನಾಟಕದ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಇದೆ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು,ಕರ್ನಾಟಕದ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಇದೆ. ಸರ್ಕಾರವು ರೈತರಿಗೆ ಸಹಕಾರ ಕೊಡುತ್ತಿಲ್ಲ, ದ್ವೇಷದ ರಾಜಕಾರಣ ಮಾಡುತ್ತಿದೆ. ತಮ್ಮ ವಿರೋಧಿಗಳನ್ನು ಯಾವ ರೀತಿಯಲ್ಲಿ ಬೇಕಾದರೂ ತೆಗೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಆಂತರಿಕ ಕಚ್ಚಾಟ ಶುರುವಾಗಿದೆ. ಶಾಮನೂರು ಶಿವಶಂಕರಪ್ಪ, ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕರಿಂದ ಆಂತರಿಕ ಕಚ್ಚಾಟ ಉಂಟಾಗಿದೆ. ಆಡಳಿತಕ್ಕೆ ಬಂದ ಇಷ್ಟು ದಿನದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಅವರ ಏಜೆಂಟ್ ಮೂಲಕ ಕಲೆಕ್ಷನ್ ಸೆಂಟರ್ ಮಾಡಿಕೊಂಡಿದೆ. ಇದೆಲ್ಲವನ್ನೂ ರಾಷ್ಟ್ರೀಯ ನಾಯಕರ ಗಮನಕ್ಕೆ ತರಬೇಕಿದೆ. ಜನರಿಗೆ ತಿಳಿಸಲು ಇದು ಅತ್ಯಂತ ಸಕಾಲ. ಈ ಸಂಬಂಧ ಮಂಗಳವಾರ ದೆಹಲಿಗೆ ಹೋಗಲಿದ್ದೇನೆ ಎಂದರು.

ಕಾಂಗ್ರೆಸ್ ಚುನಾವಣೆ ಹಿನ್ನೆಲೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹಣ ವರ್ಗಾವಣೆ ಮಾಡ್ತಿದೆ. ಅದರ ಬಗ್ಗೆ ಕಾಂಗ್ರೆಸ್ ಮಾತನಾಡ್ತಿಲ್ಲ. ಕಾಂಗ್ರೆಸ್ ನಾಯಕರ ಹಣೆ ಬರಹ ಇಷ್ಟೇ. ಕಾಂಗ್ರೆಸ್ ಮುಕ್ತ ಭಾರತ ಆಗಬೇಕು. ಲೂಟಿ ಹೊಡೆಯುವ ಕೆಲಸ ಮಾಡಲಾಗ್ತಿದೆ. ಅದೆಲ್ಲವನ್ನು ಜನರಿಗೆ ಮುಟ್ಟಿಸುವ ಕೆಲಸ ಆಗಬೇಕಿದೆ. ಆ ನಿಟ್ಟಿನಲ್ಲಿ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸುತ್ತೇನೆ ಎಂದರು.

LEAVE A REPLY

Please enter your comment!
Please enter your name here