Home ರಾಜಕೀಯ Karnataka Congress MLA Basavaraj Rayareddy Walks Out of House | ಸ್ಪೀಕರ್‌ ಜೊತೆ...

Karnataka Congress MLA Basavaraj Rayareddy Walks Out of House | ಸ್ಪೀಕರ್‌ ಜೊತೆ ಜಟಾಪಟಿ: ಸದನದಿಂದ ಅರ್ಧದಲ್ಲೇ ಎದ್ದು ಹೋದ ಕಾಂಗ್ರೆಸ್‌ ಶಾಸಕ ಬಸವರಾಜ ರಾಯರೆಡ್ಡಿ

121
0
Karnataka Congress MLA Basavaraj Rayareddy Walks Out of House
Karnataka Congress MLA Basavaraj Rayareddy Walks Out of House

ಬೆಳಗಾವಿ:

ವಿಧಾನಸಭೆಯಲ್ಲಿ ಮಂಗಳವಾರ ನಡೆದ ಪ್ರಶ್ನೋತ್ತರ ಅವಧಿಯ ಕಲಾಪಗಳು ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ನಡೆಯುತ್ತಿರುವ ಬಗ್ಗೆ ಆಡಳಿತಾರೂಢ ಕಾಂಗ್ರೆಸ್‌ನ ಹಿರಿಯ ಶಾಸಕ ಮತ್ತು ಸ್ಪೀಕರ್ ಯು.ಟಿ. ಖಾದರ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಶಾಸಕ ಬಸವರಾಜ ರಾಯರೆಡ್ಡಿ (Karnataka Congress MLA Basavaraj Rayareddy) ಅವರು ಸದನದಿಂದ ಹೊರ ನಡೆದಿದ್ದಾರೆ.

ಪ್ರಶ್ನೋತ್ತರ ಅವಧಿ ವಿಸ್ತರಿಸಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ, ಸ್ಪೀಕರ್ ನಿಯಮಾವಳಿಯನ್ನು ಪಾಲಿಸದಿದ್ದರೆ ಅದನ್ನು ಹರಿದು ಹಾಕಬೇಕು ಎಂದು ಹೇಳಿದರು. ತಡವಾಗಿ ಬಂದಿದ್ದಕ್ಕೆ ಸಭಾಧ್ಯಕ್ಷರು ಅವರನ್ನು ಟೀಕಿಸಿದ್ದು, ಕಲಾಪಕ್ಕೆ ಅಡ್ಡಿಪಡಿಸದಂತೆ ಕೇಳಿಕೊಂಡಿದ್ದಾರೆ. ನಂತರ ಸದನದಲ್ಲಿ ಗದ್ದಲ ಉಂಟಾಗಿದ್ದು ರಾಯರೆಡ್ಡಿ ಅವರು ಸದನದಿಂದ ಹೊರ ನಡೆದರು.

ಕಾಂಗ್ರೆಸ್ ಶಾಸಕ ಎನ್.ಎ. ಹಾರಿಸ್ ಅವರು ಬ್ರಾಂಡ್ ಬೆಂಗಳೂರು ಕುರಿತು ಕೇಳಿದ ಪ್ರಶ್ನೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಉತ್ತರ ನೀಡುತ್ತಿದ್ದಾಗ ಈ ಘಟನೆ ನಡೆದಿದೆ.

ಬ್ರ್ಯಾಂಡ್ ಬೆಂಗಳೂರು ಕುರಿತ ಜಟಾಪಟಿ ಮಧ್ಯೆ ಎದ್ದು ನಿಂತ ಬಸವರಾಜ ರಾಯರೆಡ್ಡಿ, ಸದನಕ್ಕೆ ಬುದ್ದಿ ಹೇಳಲು ಬಂದಿದ್ದಾರೆ. ಈ ವೇಳೆ ಸಭಾಧ್ಯಕ್ಷ ಯು.ಟಿ. ಖಾದರ್‌ ಮಧ್ಯ ಪ್ರವೇಶಿಸಿ, “ರಾಯರೆಡ್ಡಿ ನೀವು 12 ಗಂಟೆಗೆ ಸದನಕ್ಕೆ ಬಂದು ಬುದ್ದಿ ಹೇಳಬೇಡಿ” ಎಂದಿದ್ದಾರೆ.

ಇದರಿಂದ ಸಿಡಿಮಿಡಿಗೊಂಡ ರಾಯರೆಡ್ಡಿ ಅವರು, “ನಾನು ಸೀನಿಯರ್” ಎಂದಿದ್ದಾರೆ.

ಸರಿ ನೀವು ಸೀನಿಯರ್ ಅದಕ್ಕೆ ಕುಳಿತುಕೊಳ್ಳಿ ಎಂದ ಸ್ಪೀಕರ್ ಹೇಳುತ್ತಿದ್ದಂತೆ ʼನಿಮಗೆ ತಾಳ್ಮೆ ಇಲ್ಲʼ ಎಂದು ರಾಯರೆಡ್ಡಿ ಅವರು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದರಿಂದ ಮೊದಲೇ ಅಸಮಾಧಾನಗೊಂಡಿದ್ದ ರಾಯರೆಡ್ಡಿ ಅವರು ನಿಗಮ ಮಂಡಳಿಯಲ್ಲೂ ತನಗೆ ಸ್ಥಾನ ಬೇಡ ಎಂದು ಹೇಳಿದ್ದರು. ಅದಾಗಿ, ನಿನ್ನೆ ಸದನ ಒಂದು ಗಂಟೆ ತಡವಾಗಿ ನಡೆದಿದೆ ಎಂಬ ಕಾರಣಕ್ಕೂ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

LEAVE A REPLY

Please enter your comment!
Please enter your name here