ಬೆಂಗಳೂರು:
ನಿರೀಕ್ಷೆಯಂತೆ, ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ಶುಕ್ರವಾರ ರಾಜ್ಯವ್ಯಾಪಿ ಕರ್ಫ್ಯೂ ವಿಸ್ತರಣೆಯನ್ನು ಘೋಷಿಸಿದ್ದಾರೆ – ಲಾಕ್ ಡೌನ್ – ಅದರಂತೆ ಮೇ 24 ರಿಂದ ಜೂನ್ 7ರ ವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ ಬಳಿಕ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ 10 ರ ಬಳಿಕವೂ ಜನರು ಓಡಾಡುತ್ತಿದ್ದಾರೆ. ಹೀಗಾಗಿ ಬೆ.6 ರಿಂದ 9.45ರವರೆಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗುತ್ತಿದ್ದು, ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹಿಂದಿನ ಮಾರ್ಗಸೂಚಿ ಕ್ರಮಗಳನ್ನು ಮುಂದುವರೆಸಲಾಗಿದೆ.
Lockdown extended in Karnataka#covidlockdown #CovidIndia pic.twitter.com/UzCgKPLgpC
— Arun Kumar HV ಅರುಣ್ ಕುಮಾರ್ ಹೆಚ್ ವಿ (@arunkumarhv) May 21, 2021
Karnataka's lockdown will be extended till June 07th. I appeal to all citizens to adhere to guidelines and co-operate with the government to contain the spread of infection. Let us work together to defeat the pandemic
— B.S. Yediyurappa (@BSYBJP) May 21, 2021