Karnataka Dy CM DK Shivakumar | "We will issue a notice to all those who spoke beyond the instructions of the party"
ಬೆಂಗಳೂರು:
“ಈಗ ಯಾರ್ಯಾರು ಪಕ್ಷದ ಸೂಚನೆ ಮೀರಿ ಮಾತನಾಡಿದ್ದಾರೋ ಅವರಿಗೆಲ್ಲಾ ನೋಟಿಸ್ ನೀಡುತ್ತೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಎಚ್ಚರಿಕೆಯ ಸಂದೇಶ ನೀಡಿದರು.
ಕೆಲವು ಶಾಸಕರು ನಿಮ್ಮ ಪರವಾಗಿ ಲಾಬಿ ಮಾತುಗಳನ್ನಾಡುತ್ತಿದ್ದಾರೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಹುಬ್ಬಳ್ಳಿಯ ಪ್ರವಾಸಿ ಮಂದಿರದ ಬಳಿ ಶುಕ್ರವಾರ ಹೀಗೆ ಪ್ರತಿಕ್ರಿಯೆ ನೀಡಿದರು.
ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ “ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಿದ ನಂತರ, ಇಬ್ಬರೂ ಸೇರಿ ಪ್ರಮಾಣವಚನ ಸ್ವೀಕರಿಸಿದ್ದೇವೆ. ಆಗ ನಿಮಗೆಲ್ಲಾ ಹೇಳಿದ್ವಾ ನಾವು? ಸುಮ್ಮನೆ ಯಾಕೆ ಇಲ್ಲದ ವಿಷಯ ನೀವೇ ಸೃಷ್ಟಿ ಮಾಡಿಕೊಳ್ಳುತ್ತೀರಾ? ಇದೆಲ್ಲಾ ಅವಶ್ಯಕತೆಯಿಲ್ಲ” ಎಂದು ಹೇಳಿದರು.
ಅಧಿಕಾರ ಹಂಚಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, “ಯಾವುದೇ ಆಸ್ತಿಯಿಲ್ಲ ಹಂಚಿಕೊಳ್ಳೋಕೆ” ಎಂದು ಉತ್ತರಿಸಿದರು.
