Karnataka Election 2023: Congress Appointments New District Observers
ಬೆಂಗಳೂರು:
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಕಾಂಗ್ರೆಸ್ ಪಕ್ಷ ನೂತನ ಜಿಲ್ಲಾ ವೀಕ್ಷಕರನ್ನು ಶುಕ್ರವಾರ ನೇಮಿಸಿದೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕರ್ನಾಟಕ ಕಾಂಗ್ರೆಸ್ ನ ನೂತನ ಜಿಲ್ಲಾ ವೀಕ್ಷಕರಾಗಿ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಶಕ್ತಿಸಿನ್ಹ ಗೋಹಿಲ್, ಆಂಧ್ರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಸಂಸದ ಉತ್ತಮ್ ಕುಮಾರ್ ರೆಡ್ಡಿ ಮತ್ತು ರಾಯ್ ಗಂಜ್ ಕಾಂಗ್ರೆಸ್ ಸಂಸದೆ ದೀಪ್ ದಾಸ್ಮುನ್ಶಿ ಅವರನ್ನು ನೇಮಕ ಮಾಡಲಾಗಿದೆ.
ಶಕ್ತಿಸಿನ್ಹ ಗೋಹಿಲ್ ರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪರದ ವೀಕ್ಷಕರನ್ನಾಗಿ ನೇಮಕ ಮಾಡಿದ್ದು, ಉತ್ತಮ್ ಕುಮಾರ್ ರೆಡ್ಡಿ ಅವರಿಗೆ ರಾಯಚೂರು ಮತ್ತು ದೀಪ್ ದಾಸ್ಮುನ್ಶಿ ಅವರನ್ನು ಶಿವಮೊಗ್ಗ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.
ಈ ಕುರಿತು ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರು ಪ್ರಕಟಣೆ ಹೊರಡಿಸಿದ್ದಾರೆ.
