Home ಕರ್ನಾಟಕ Karnataka: February itself, summer heat| ಫೆಬ್ರವರಿಯಲ್ಲಿಯೇ ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಬೇಸಿಗೆ ಬಿಸಿ: ವನ್ಯಜೀವಿಗಳ...

Karnataka: February itself, summer heat| ಫೆಬ್ರವರಿಯಲ್ಲಿಯೇ ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಬೇಸಿಗೆ ಬಿಸಿ: ವನ್ಯಜೀವಿಗಳ ಪರದಾಟ

17
0
summer heat

ಬೆಂಗಳೂರು: ಮುಂಜಾನೆ ಕೂಲ್ ಆಗಿರೋ ಸಿಲಿಕಾನ್ ಸಿಟಿಯ ವಾತಾವರಣ ಉಷ್ಣಾಂಶ ಹೆಚ್ಚಿಸಿಕೊಳುತ್ತಿದ್ದು ಜನ ಜೀವನವನ್ನು ಅಸ್ತವ್ಯಸ್ತ ಮಾಡಿದೆ.

ರಾಜ್ಯದಲ್ಲಿ ಸಂಪೂರ್ಣ ಬೇಸಿಗೆ ಆರಂಭ ಆಗುವುದಕ್ಕೂ ಮುನ್ನವೇ ಬೇಸಿಗೆ ಧಗೆ ಜನರನ್ನು ಹೈರಾಣುಗೊಳಿಸಿದೆ. ರಾಜ್ಯದಲ್ಲಿ ಬಿಸಿಲಿನ ಬೇಗೆಗೆ ಜನ ತತ್ತರಿಸೋ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ರಾಜ್ಯದ ಹಲವೂ ಭಾಗಗಳಲ್ಲಿ ಈಗಾಗಲೇ ನೀರಿಗೆ ಹಾಹಾಕಾರ ಆರಂಭವಾಗಿದ್ದು‌ ಇದರ ಜೊತೆ ಬಿಸಿಲಿನ ಶಾಕಕ್ಕೆ ಹಲವಾರು ತೊಂದರೆಗಳು ಶುರುವಾಗಿದೆ. ಇನ್ನೂ ತಂಪಾದ ವಾತಾವರಣವನ್ನ ಹೊಂದಿರಿವ ಸಿಲಿಕಾನ್ ಸಿಟಿ ಕೂಡ ಈ ಬಾರಿ ಸುಡಲು ಆರಂಭಿಸಿದ್ದೆ.

ಸಿಲಿಕಾನ್ ಸಿಲಿಕಾನ್ ಗರಿಷ್ಟ ಉಷ್ಣಾಂಶ ತಾಪಮಾನವನ್ನು ಕಳೆದ ವಾರ ದಾಟಿದ್ದು, ಸಿಲಿಕಾನ್ ಸಿಟಿಯಲ್ಲಿ 35 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿದೆ. ಇನ್ನೂ ಕಳೆದ ಫೆಬ್ರವರಿ ಮೊದಲ ವಾರದಲ್ಲಿ 30.3 ಡಿಗ್ರಿ ಸೆಲ್ಸಿಯಸ್ ಇದ್ದ ಉಷ್ಣಾಂಶ ಈ ಬಾರಿ 31.9 ಡಿಗ್ರಿ ತಲುಪಿದ್ದು, ಇನ್ನೊಂದು ವಾರದಲ್ಲಿ ಒಂದೆರಡು ಡಿಗ್ರಿ ಉಷ್ಣಾಂಶ ಕಡಿಮೆಯಾದರೂ ಮಾರ್ಚ್‌ನಲ್ಲಿ ಮತ್ತಷ್ಟು ಉಷ್ಣಾಂಸ ಏರಿಕೆಯಾಗುವ ಸಾಧ್ಯತೆ ಇದೆ. ಇನ್ನೂ‌ ಸೂರ್ಯನ ಬಿಸಿಲಿನ ತಾಪಕ್ಕೆ ಸಿಲಿಕಾನ್ ಮಂದಿಯಂತೂ ಸುಸ್ತಾಗಿದ್ದು. ದಣಿದು ಬೆಂಡಾಗುತ್ತಿದ್ದಾರೆ.

ಬೇಸಿಗೆ ಆರಂಭದ ಬಿಸಲನ್ನು ತಡೆಯಲಾಗದೆ ಎಳನೀರು ಹಾಗೂ ಇನ್ನಿತರ ತಂಪು ಪಾನೀಯಗಳ ಮೊರೆ ಹೋಗಲು ಆರಂಭಿಸಿದ್ದಾರೆ.‌ ಇನ್ನೂ ರಾಜ್ಯದ ಹಲವೂ ಭಾಗದಲ್ಲಿ ಬೇಸಿಗೆ ಬಿಸಿ ಜನರಿಗೆ ಮುಟ್ಟಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಉಷ್ಣಾಂಶ ಹೆಚ್ಚಾಗಲಿದ್ದು ಜನ ಜೀವನವನ್ನು ಹದಗೆಡಿಸುವಂತೆ ಕಾಣುತ್ತಿದೆ. ಓಟ್ನಲ್ಲಿ ಸಿಲಿಕಾನ್ ಸಿಟಿ ಮಂದಿಯನ್ನ ಬಿಸಿಲು ಬವಣಿಸುತ್ತಿದ್ದು. ಮುಂದಿನ ದಿನಗಳಲ್ಲಿ ಸಿಲಿಕಾನ್ ಸಿಟಿ ವಾತವರಣದ ತಾಪಮಾನ ಯಾವ ಮಟ್ಟಕ್ಕೆ ಹೋಗುತ್ತೆ ಅನ್ನೋದು ಮಾತ್ರ ಯಾರಿಗೂ ತಿಳಿಯದ ಯಕ್ಷಪ್ರಶ್ನೆಯಾಗಿದೆ.

ಫೆಬ್ರವರಿಯಲ್ಲಿಯೇ ಬೇಸಿಗೆಯ ಬಿರುಬಿಸಿಲು ಇದ್ದು ಮರದ ನೆರಳು ಕೂಡ ಶಾಖದ ಗೂಡಾಗುತ್ತಿದೆ. ಹೀಗಾಗಿ ಹೈರಾಣಾದ ವನ್ಯಜೀವಿಗಳು ನೀರಿನತ್ತ ಪಯಣ ಬೆಳೆಸಿವೆ. ನೀರು ಕಂಡ ಕೂಡಲೆ ನೀರಿಗಿಳಿದು ತಣಿಸಿಕೊಳ್ಳುತ್ತಿವೆ.

ಬೇಸಿಗೆಯ ಬಿರುಬಿಸಿಲು ತಾಳಲಾರದೆ ಆನೆಗಳ ದಂಡು ನೀರಿಗಿಳಿದಿದೆ. ಚಾಮರಾಜನಗರ ಜಿಲ್ಲೆಯ ಪಿಜಿಪಾಳ್ಯದ ಸಫಾರಿ ಮಾರ್ಗದಲ್ಲಿ ವನ್ಯ ಜೀವಿಗಳು ನೀರಿರುವ ಕಡೆ ವಲಸೆ ಹೋಗುತ್ತಿದ್ದು, ಕಾಡಾನೆ ಮತ್ತು ಕಾಡೆಮ್ಮೆ ಸೇರಿ ಹಲವು ಪ್ರಾಣಿಗಳ ಬೇಸಿಗೆ ಸಂಚಾರ ಮಾಡುತ್ತಿದೆಸಫಾರಿ ವಿಕ್ಷಣೆಗೆ ಆಗಮಿಸಿದ್ದವರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

LEAVE A REPLY

Please enter your comment!
Please enter your name here