Karnataka Film Chamber delegation meets Deputy Chief Minister DK Shivakumar
ಬೆಂಗಳೂರು:
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಫಿಲ್ಮ್ ಚೇಂಬರ್ ನಿಯೋಗ ಭೇಟಿ ಮಾಡಿದೆ.
ಕುಮಾರಕೃಪ ಅತಿಥಿ ಗೃಹದಲ್ಲಿ ಚೇಂಬರ್ ಅಧ್ಯಕ್ಷ ಎನ್ ಎಮ್ ಸುರೇಶ್ ನೇತೃತ್ವದ ನಿಯೋಗ ಭೇಟಿ ಮಾಡಿದೆ. ವ್ಯಾಟ್, ಚಿತ್ರಮಂದಿರದ ಟ್ಯಾಕ್ಸ್ ಗಳ ಬಗ್ಗೆ ಮನವಿ ಮಾಡಿದ್ದೀವಿ ಎಂದು ಚೇಂಬರ್ ಅಧ್ಯಕ್ಷ ಸುರೇಶ್ ಹೇಳಿದರು.
ನಿರ್ದೇಶಕರಾದ ಬಾ ಮ ಗಿರೀಶ್, ಜಿ ವೆಂಕಟೇಶ್, ವಿ ಸುಬ್ರಮಣಿ, ನರಸಿಂಹಲು ಹಾಗೂ ಸೌಂದರರಾಜನ್ ಅವರು ಕುಮಾರಕೃಪಾ ಅತಿಥಿಗೃಹದಲ್ಲಿ ಶುಕ್ರವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
