141 ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆ
ಬೆಂಗಳೂರು:
ಬೃಹತ್ ಮತ್ತು ಕೈಗಾರಿಕೆ, ಹಾಗೂ ಮೂಲ ಸೌಲಭ್ಯ ಅಭಿವೃದ್ದಿ ಸಚಿವ ಎಂ. ಬಿ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ 141ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಒಟ್ಟು ₹ 3,607.19 ಕೋಟಿ ಬಂಡವಾಳ ಹೂಡಿಕೆಯ 62 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ 10,755 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.
₹ 50 ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆಯ 8 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ ರಾಜ್ಯದಲ್ಲಿ ₹2,088.44 ಕೋಟಿ ಮೊತ್ತದ ಬಂಡವಾಳ ಹೂಡಿಕೆಯಾಗಲಿದೆ. ಇವುಗಳಿಂದ 6,360 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.
₹15 ಕೋಟಿಗಳಿಂದ ₹50 ಕೋಟಿ ಮೊತ್ತದ ಒಳಗಿನ ಬಂಡವಾಳ ಹೂಡಿಕೆಯ 51 ಹೊಸ ಯೋಜನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇವುಗಳಿಂದ ₹941.40 ಕೋಟಿ ಬಂಡವಾಳ ಹೂಡಿಕೆಯಾಗಲಿದೆ. ಅಂದಾಜು 4,395 ಜನರಿಗೆ ಉದ್ಯೋಗಗಳು ಲಭ್ಯವಾಗಲಿವೆ.
ಹೆಚ್ಚುವರಿ ಬಂಡವಾಳ ಹೂಡಿಕೆಯ 3 ಯೋಜನೆಗಳಿಗೆ ಸಭೆಯು ಅನುಮೋದಿಸಿದ್ದು ಇದರಿಂದ ₹577.35 ಕೋಟಿ ಬಂಡವಾಳ ಹೂಡಿಕೆ ಆಗಲಿದೆ.
Significant Achievement by the Single Window Approval Committee:
— M B Patil (@MBPatil) November 29, 2023
62 Projects | ₹3607.19 Crore Investment |
Creation of 10,755 Jobs!
Aiming to prioritize increased investment and job creation in the state's industrial sector, I convened a meeting of the state-level Single Window… pic.twitter.com/ocq7eapLGy
ಸಭೆಯಲ್ಲಿ ಸರ್ಕಾರದ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ, ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ. ರವಿ ಬಿ.ಪಿ. ಕೆ.ಐ.ಎ.ಡಿ.ಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಂ. ಮಹೇಶ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ತಾಂತ್ರಿಕ ನಿರ್ದೇಶಕ ಶ್ರೀ. ಆರ್. ರಮೇಶ್, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಹಾಗು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಅನುಮೋದನೆ ನೀಡಿರುವ ಪ್ರಮುಖ ಪ್ರಸ್ತಾವನೆಗಳು ಹೀಗಿವೆ
- ಸಂಸ್ಥೆ: ಟೆಕ್ಸ್ ಕಾನ್ ಸ್ಟೀಲ್ಸ್ ಲಿಮಿಟೆಡ್
ಸ್ಥಳ: ರಾಯಚೂರು
ಹೂಡಿಕೆ: ₹480 ಕೋಟಿ
ಉದ್ಯೋಗ: 200 - ಸಂಸ್ಥೆ: ಹುಂಡ್ರಿ ಷುಗರ್ಸ್ ಅಂಡ್ ಎಥೆನಾಲ್ ಪೈವೇಟ್ ಲಿಮಿಟೆಡ್
ಸ್ಥಳ: ಧಾರವಾಡ ಜಿಲ್ಲೆ
ಹೂಡಿಕೆ: ₹476.54 ಕೋಟಿ
ಉದ್ಯೋಗ: 300 - ಸಂಸ್ಥೆ: ಬ್ರೆನ್ ಲೈಫ್ ಸೈನ್ಸಸ್ ಪೈವೇಟ್ ಲಿಮಿಟೆಡ್
ಸ್ಥಳ: ಬೆಂಗಳೂರು ನಗರ ಜಿಲ್ಲೆ
ಹೂಡಿಕೆ: ₹ 230.56 ಕೋಟಿ
ಉದ್ಯೋಗ: 1,750 - ಸಂಸ್ಥೆ: ಅಲ್ಟೈನ್ ಎಥೆನಾಲ್ ಪೈವೇಟ್ ಲಿಮಿಟೆಡ್
ಸ್ಥಳ: ಗದಗ ಜಿಲ್ಲೆ
ಹೂಡಿಕೆ: ₹229.19 ಕೋಟಿ
ಉದ್ಯೋಗ: 107 - ಸಂಸ್ಥೆ: ವಿರೂಪಾಕ್ಷ ಲ್ಯಾಬೊರೇಟರೀಸ್ ಪೈವೇಟ್ ಲಿಮಿಟೆಡ್
ಸ್ಥಳ: ಯಾದಗಿರಿ ಜಿಲ್ಲೆ
ಹೂಡಿಕೆ: ₹ 212.55ಕೋಟಿ
ಉದ್ಯೋಗ: 790 - ಸಂಸ್ಥೆ: ಕ್ವಾಲ್ ಕಾಂ ಇಂಡಿಯಾ ಪೈವೇಟ್ ಲಿಮಿಟೆಡ್
ಸ್ಥಳ: ಬೆಂಗಳೂರು
ಹೂಡಿಕೆ: ₹175 ಕೋಟಿ
ಉದ್ಯೋಗ: 1,553 - ಸಂಸ್ಥೆ: ಎಲ್.ಆರ್.ಬಿ ವುಡ್ ಇಂಡಸ್ಟ್ರಿ (ಇಂಡಿಯಾ)
ಸ್ಥಳ: ಚಾಮರಾಜನಗರ ಜಿಲ್ಲೆ
ಹೂಡಿಕೆ: ₹ 102.50 ಕೋಟಿ
ಉದ್ಯೋಗ: 160 - ಸಂಸ್ಥೆ: ಮಾತಾ ಇಂಡಸ್ಟ್ರೀಸ್
ಸ್ಥಳ: ಬೆಂಗಳೂರು ನಗರ ಜಿಲ್ಲೆ
ಹೂಡಿಕೆ: ₹ 102.10 ಕೋಟಿ
ಉದ್ಯೋಗ: 1,500