Home ಬೆಂಗಳೂರು ನಗರ ಬಿಬಿಎಂಪಿಯಲ್ಲಿ 2019-23 ರವರೆಗೆ ನಡೆದಿರುವ ಕಾಮಗಾರಿಗಳ ತನಿಖೆ ನಡೆಸಲು 4 “ತಜ್ಞರ ತನಿಖಾ ಸಮಿತಿ”ಗಳ ರಚನೆ

ಬಿಬಿಎಂಪಿಯಲ್ಲಿ 2019-23 ರವರೆಗೆ ನಡೆದಿರುವ ಕಾಮಗಾರಿಗಳ ತನಿಖೆ ನಡೆಸಲು 4 “ತಜ್ಞರ ತನಿಖಾ ಸಮಿತಿ”ಗಳ ರಚನೆ

20
0
BBMP building

ಬೆಂಗಳೂರು:

ಬಿಬಿಎಂಪಿಯಲ್ಲಿ 2019-223 ರವರೆಗೆ ನಡೆದಿರುವ ಯೋಜನೆಗಳ / ಕಾರ್ಯಕ್ರಮಗಳ ಕಾಮಗಾರಿಗಳಲ್ಲಿ ಅಕ್ರಮಗಳಾಗಿವೆ ಎಂಬ ವಿಚಾರವಾಗಿ ವಿವರವಾದ ತನಿಖೆಯನ್ನು ನಡೆಸಲು ತನಿಖಾ ಸಮಿತಿಗಳನ್ನು ರಚಿಸಿ ನಗರಾಭಿವೃದ್ಧಿ ಇಲಾಖೆಯು ಆದೇಶ ಹೊರಡಿಸಲಾಗಿದೆ.

ಮುಖ್ಯಮಂತ್ರಿಗಳು, ಬೆಂಗಳೂರು ನಗರಾಭಿವೃದ್ಧಿ ಮತ್ತು ಜಲ ಸಂಪನ್ಮೂಲ ಸಚಿವರು, ಮಾನ್ಯ ಮುಖ್ಯಮಂತ್ರಿಗಳಿಗೆ,

ಪಾಲಿಕೆ ವ್ಯಾಪ್ತಿಯಲ್ಲಿ 2019-20 ರಿಂದ 2022-23 ರವರೆಗೆ ನಡೆದಿರುವ ಯೋಜನೆಗಳ / ಕಾರ್ಯಕ್ರಮಗಳ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾರ್ವಜನಿಕರಿಂದ / ಜನ ಪ್ರತಿನಿಧಿಗಳಿಂದ / ಮಾಧ್ಯಮಗಳಲ್ಲಿ ಹಾಗೂ ಗುತ್ತಿಗೆದಾರರ ಸಂಘಗಳಿಂದ ವ್ಯಾಪಕ ದೂರುಗಳು ಬಂದಿರುತ್ತದೆ. ಅಲ್ಲದೆ ಕಾಮಗಾರಿಗಳನ್ನು ನಿರ್ವಹಿಸದೆಯೇ ಬಿಲ್ ಪಾವತಿಸಿರುವುದು, ಟೆಂಡರ್‌ ನೀಡುವಲ್ಲಿ ಕೆ.ಟಿ.ಪಿ.ಪಿ ನಿಯಮಗಳನ್ನು ಉಲ್ಲಂಘಿಸಿರುವುದು, ಹೆಚ್ಚಿನ ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಪಾಡದಿರುವುದು ಹಾಗೂ ಅನುಮೋದಿತ ಕಾಮಗಾರಿಗಳನ್ನು ನಿಯಮಾನುಸಾರ ಅನುಷ್ಟಾನಗೊಳಿಸದಿರುವ ದೂರುಗಳು ಇರುವ ಬಗ್ಗೆ ವಿವರಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಪಾಲಿಕೆಯ ವ್ಯಾಪ್ತಿಯಲ್ಲಿ ರಾಜ್ಯ / ಕೇಂದ್ರ / ಬಿಬಿಎಂಪಿ ಅನುದಾನದಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಸಂಪೂರ್ಣವಾದ ತನಿಖೆ ನಡೆಸುವ ಅವಶ್ಯಕತೆಯನ್ನು ಸ್ಪಷ್ಟಪಡಿಸಿ, ಆಯಾ ವಿಷಯ ವ್ಯಾಪ್ತಿಗೆ ಪ್ರತ್ಯೇಕವಾದ ತಜ್ಞರ ತನಿಖಾ ಸಮಿತಿಯನ್ನು ರಚಿಸಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ 2019-23 ರವರೆಗೆ ಪ್ರಮುಖವಾಗಿ ಘನತ್ಯಾಜ್ಯ ನಿರ್ವಹಣೆ ಕಾಮಗಾರಿಗಳು, ರಸ್ತೆ ಅಭಿವೃದ್ಧಿ ಕಾಮಗಾರಿಗಳು, ಓಎಫ್‌ಸಿ ಕೇಬಲ್ ಅಳವಡಿಕೆ, ಬೃಹತ್ ನೀರುಗಾಲುವೆ ಕಾಮಗಾರಿಗಳು, ಕೇಂದ್ರ / ವಲಯ ನಗರ ಯೋಜನೆ ವಿಭಾಗಗಳಲ್ಲಿ ನಕ್ಷೆ ಮಂಜೂರಾತಿ/ ಸ್ವಾಧೀನಾನುಭವ ಪತ್ರ ನೀಡುವಿಕೆ, ಕೆರೆಗಳ ಅಭಿವೃದ್ಧಿ ಕಾಮಗಾರಿಗಳು, ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿನ ಕಾಮಗಾರಿಗಳು ಮತ್ತು ವಾರ್ಡ್ ಮಟ್ಟದ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ.

ಈಗಾಗಲೇ ತನಿಖೆಗೆ ಒಳಪಡಿಸಿರುವ ಕಾಮಗಾರಿಗಳನ್ನು ಹೊರತುಪಡಿಸಿ, ವಿವಿಧ ಕಾಮಗಾರಿಗಳ ಸ್ಥಳ ಮತ್ತು ದಾಖಲಾತಿಗಳ ಪರಾಮರ್ಶೆಯೊಂದಿಗೆ ಆರೋಪಿತರ ಸ್ಪಷ್ಟ ಗುರುತಿಸುವಿಕೆಯ ಸಹಿತ ಪರಿಪೂರ್ಣ ತನಿಖಾ ವರದಿಯನ್ನು ಸೂಕ್ತ ಅಭಿಪ್ರಾಯ / ಶಿಫಾರಸ್ಸಿನೊಂದಿಗೆ 30 ದಿನಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಸಮಿತಿಗಳ ವಿವರ:

  1. ಘನತ್ಯಾಜ್ಯ ನಿರ್ವಹಣೆ ಕಾಮಗಾರಿಗಳ ತನಿಖಾ ಸಮಿತಿ:

ಅಧ್ಯಕ್ಷರು: ಉಜ್ವಲ್ ಕುಮಾರ್ ಘೋಷ್, ಭಾ.ಆ.ಸೇ., ಅಧ್ಯಕ್ಷರು.

ಸದಸ್ಯರು: ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರರಾದ ದೊಡ್ಡಿಹಾಳ್, ಬಸವರಾಜಕೋಟಿ ಹಾಗೂ ಕೆ.ಪಿ.ಟಿ.ಸಿ.ಎಲ್ ನ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಟಿ. ಪ್ರಭಾಕರ್.

  1. ರಸ್ತೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಓ.ಎಫ್.ಸಿ. ಕೇಬಲ್‌ಗೆ ಅನುಮತಿ ನೀಡಿರುವ ಬಗ್ಗೆ ತನಿಖಾ ಸಮಿತಿ.

ಅಧ್ಯಕ್ಷರು: ಅಮ್ಮಾನ್‌ ಆದಿತ್ಯ ಬಿಸ್ವಾಸ್, ಭಾ.ಆ.ಸೇ.

ಸದಸ್ಯರು: ಲೋಕೋಪಯೋಗಿ ಇಲಾಖೆಯ ಪ್ರಧಾನ ಅಭಿಯಂತರರಾದ ಪ್ರಭಾಕರ್ ಡಿ ಹಮ್ಮಿಗೆ, ಎನ್.ಹೆಚ್.ಎ.ಐನ ಜ್ವಾಲೇಂದ್ರ ಕುಮಾರ್ (ಜಿ.ಎಂ), ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರರಾದ ಮೋಹನ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಬಸವರಾಜ್ ಶಂಶಿಮಠ್ ಬಿ.ಎನ್ ಹಾಗೂ ಎನ್.ಎಸ್. ಮೋಹನ್.

  1. ಬೃಹತ್ ನೀರುಗಾಲುವೆ ಕಾಮಗಾರಿಗಳು ಹಾಗೂ ಕೇಂದ್ರ ವಲಯ ನಗರ ಯೋಜನೆ ವಿಭಾಗಗಳಲ್ಲಿ ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪತ್ರ (OC) ನೀಡಿರುವ ಬಗ್ಗೆ ತನಿಖಾ ಸಮಿತಿ:

ಅಧ್ಯಕ್ಷರು: ಪಿ.ಸಿ. ಜಾಫರ್, ಭಾ.ಆ.ಸೇ.,

ಸದಸ್ಯರು: ಇ.ಐ.ಸಿ.ಆರ್ ನ ಕಾರ್ಯದರ್ಶಿಯಾದ ಎಸ್.ಬಿ. ಸಿದ್ಧಗಂಗಪ್ಪ, ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರರಾದ ಹೆಚ್.ಆರ್. ರಾಮಕೃಷ್ಣ ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಮಲ್ಲೇಶ್.

  1. ಕೆರೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳು ಹಾಗೂ ವಾರ್ಡ್ ಮಟ್ಟದ ಕಾಮಗಾರಿಗಳ ತನಿಖಾ ಸಮಿತಿ.

ಅಧ್ಯಕ್ಷರು: ಡಾII ವಿಶಾಲ್. ಆರ್., ಭಾ.ಆ.ಸೇ..

ಸದಸ್ಯರು: ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರರಾದ ಬೀಸೇಗೌಡ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಹೆಚ್.ಪಿ. ಪ್ರಕಾಶ್, ಶ್ರೀಕಾಂತ್, ಹೆಚ್. ಕುಮಾರ್ ಹಾಗೂ ಲೋಕೋಪಯೋಗಿ ಇಲಾಖೆಯ ಅ.ಅ ಜಿ.ಎಸ್. ಗೋಪಿನಾಥ್.

ತನಿಖೆಯ ವ್ಯಾಪ್ತಿಯಲ್ಲಿ ಪ್ರಮುಖವಾಗಿ 16 ಅಂಶಗಳನ್ನು ಪರಾಮರ್ಶಿಸಲು ಸೂಚಿಸಿದ್ದು, ಆಯಾ ವಿಷಯ ವ್ಯಾಪ್ತಿಯ ತನಿಖಾ ಸಮಿತಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸಮಿತಿಯು ಕಾಲಾನುಕಾಲಕ್ಕೆ ತನಿಖೆಗಾಗಿ ಅಪೇಕ್ಷಿಸುವ ಎಲ್ಲಾ ಕಡತಗಳು/ದಾಖಲಾತಿಗಳು / ವಹಿಗಳು ಇತ್ಯಾದಿಗಳನ್ನು ಒದಗಿಸತಕ್ಕದ್ದು ಹಾಗೂ ತನಿಖಾ ಸಮಿತಿಯೊಂದಿಗೆ ಸಂಪೂರ್ಣವಾಗಿ ಸಹಕರಿಸಲು ಸೂಚಿಸಿದೆ.

ಜೊತೆಗೆ ತನಿಖಾ ಸಮಿತಿಗಳಿಗೆ ಅಗತ್ಯವಿರುವ ಸಿಬ್ಬಂದಿ, ಸಾಮಗ್ರಿಗಳು, ವಾಹನಗಳ ವ್ಯವಸ್ಥೆ ಹಾಗೂ ಕಛೇರಿ ಮತ್ತು ಅಗತ್ಯ ಸಲಕರಣೆಗಳನ್ನು ಒದಗಿಸತಕ್ಕದ್ದು, ಸಮಿತಿಗಳಿಗೆ ಭತ್ಯೆ ಸೌಲಭ್ಯಗಳನ್ನು ನಿಯಮಾನುಸಾರ ಒದಗಿಸಬೇಕು. ತನಿಖಾ ಸಮಿತಿಗಳಿಗೆ ಅಗತ್ಯವಿದ್ದಲ್ಲಿ ಅಧ್ಯಕ್ಷರ ಕೋರಿಕೆಯ ಮೇರೆಗೆ ಗುಣಮಟ್ಟ ಪರೀಕ್ಷೆಗೆ ನೊಂದಾಯಿತ 3ನೇ ಸ್ವತಂತ್ರ ಸಂಸ್ಥೆಯ (3rd Party Assistance) ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮವಹಿಸಬೇಕು. ಜೊತೆಗೆ ಸದರಿ ಸಮಿತಿಗಳ ಅಧ್ಯಕ್ಷರುಗಳಾದ ಹಿರಿಯ ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳಿಗೆ ಈ ಹೆಚ್ಚುವರಿ ಪ್ರಭಾರಿ ಕರ್ತವ್ಯ ನಿರ್ವಹಣೆಗೆ ಸರ್ಕಾರದ ಅನುಮತಿ ನೀಡಿದೆ ಎಂದು ಆದೇಶದಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here