Home ಆರೋಗ್ಯ ಬೆಂಗಳೂರಿನ ಐದು ಆಸ್ಪತ್ರೆಗಳಲ್ಲಿ ಡೆಂಗ್ಯೂ ಚಿಕಿತ್ಸೆಗೆಂದೇ ಬೆಡ್ ಕಾಯ್ದಿರಿಸಲು ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರಿನ ಐದು ಆಸ್ಪತ್ರೆಗಳಲ್ಲಿ ಡೆಂಗ್ಯೂ ಚಿಕಿತ್ಸೆಗೆಂದೇ ಬೆಡ್ ಕಾಯ್ದಿರಿಸಲು ಆರೋಗ್ಯ ಇಲಾಖೆ ಸೂಚನೆ

44
0
Dengue

ಬೆಂಗಳೂರು: ದಿನದಿಂದ ದಿನಕ್ಕೆ ಡೆಂಗ್ಯೂ  ಪ್ರಕರಣಗಳ ಸಂಖ್ಯೆ ಹೆಚ್ಚಳ  ಹಿನ್ನೆಲೆ ಬೆಂಗಳೂರಿನ ಐದು ಆಸ್ಪತ್ರೆಗಳಲ್ಲಿ ಬೆಡ್​ಗಳನ್ನು ಕಾಯ್ದಿರಿಸಲು ಆರೋಗ್ಯ ಇಲಾಖೆ  ಸೂಚನೆ ನೀಡಿದೆ. ಡೆಂಗ್ಯೂ ಕೇಸ್​ಗಳ ಚಿಕಿತ್ಸೆಗೆಂದೇ ಬೆಡ್ ರಿಸರ್ವ್ ಮಾಡಲು ಆದೇಶಿಸಲಾಗಿದೆ.

ಇನ್ನು ರಾಜ್ಯದಲ್ಲಿ ಡೆಂಗ್ಯೂ ಕೇಸ್​ಗಳು ದಿನೇದಿನೆ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ 524 ಡೆಂಗ್ಯೂ ಕೇಸ್ ದಾಖಲಾಗಿವೆ. ಬೆಂಗಳೂರಲ್ಲಿ ಒಂದೇ ದಿನಕ್ಕೆ 270 ಕೇಸ್​ಗಳು ದಾಖಲಾಗಿದ್ದು, ಆ ಮೂಲಕ ಕರ್ನಾಟಕದಲ್ಲಿ ಡೆಂಗ್ಯೂ ಕೇಸ್​ಗಳ ಸಂಖ್ಯೆ 10973ಕ್ಕೆ ಏರಿಕೆ ಆಗಿದೆ. 

ಜನವರಿಯಿಂದ ಬರೋಬ್ಬರಿ 10 ಸಾವಿರದ 449ಕೇಸ್​ಗಳು ದೃಢಪಟ್ಟಿವೆ. ನಿನ್ನೆ 487 ಮಂದಿ ಡೆಂಗ್ಯೂಗೆ ತುತ್ತಾಗಿದ್ದರು. ಈ ಪೈಕಿ ಬೆಂಗಳೂರಿನಲ್ಲೇ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.

ಯಾವೆಲ್ಲಾ ಆಸ್ಪತ್ರೆಗಳಿಗೆ ಸೂಚನೆ?

  • ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 25 ಬೆಡ್​ಗಳು ಮೀಸಲು
  • ಸಿ.ವಿ.ರಾಮನ್ ನಗರ ಆಸ್ಪತ್ರೆಯಲ್ಲಿ 25 ಬೆಡ್​ಗಳು
  • ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ 25 ಬೆಡ್ಯ
  • ಯುಲಹಂಕ ತಾಲೂಕು ಆಸ್ಪತ್ರೆ 10 ಬೆಡ್
  • ಕೆ.ಆರ್.ಪುರಂ ತಾಲೂಕು ಆಸ್ಪತ್ರೆಯಲ್ಲಿ 10 ಬೆಡ್​

LEAVE A REPLY

Please enter your comment!
Please enter your name here