Home High Court/ಹೈಕೋರ್ಟ್ Karnataka High Court on Social Media: ಸಾಮಾಜಿಕ ಮಾಧ್ಯಮಗಳ ಬಳಕೆಗೆ ವಯಸ್ಸಿನ ಮಿತಿ ಜಾರಿಗೆ...

Karnataka High Court on Social Media: ಸಾಮಾಜಿಕ ಮಾಧ್ಯಮಗಳ ಬಳಕೆಗೆ ವಯಸ್ಸಿನ ಮಿತಿ ಜಾರಿಗೆ ತರಲು ಸರ್ಕಾರ ಪರಿಗಣಿಸಬೇಕು- ಕರ್ನಾಟಕ ಹೈಕೋರ್ಟ್

30
0
Karnataka High Court

ಬೆಂಗಳೂರು:

ಮದ್ಯಪಾನ ಮಾಡಲು ಕಾನೂನುಬದ್ಧ ವಯಸ್ಸು ಇರುವಂತೆಯೇ ಸಾಮಾಜಿಕ ಮಾಧ್ಯಮ ಬಳಕೆಗೂ ವಯೋಮಿತಿಯನ್ನು ಜಾರಿಗೆ ತಂದರೆ ಸೂಕ್ತ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಸಚಿವಾಲಯ ಹೊರಡಿಸಿದ ಆದೇಶಗಳ ವಿರುದ್ಧದ ಅರ್ಜಿಯನ್ನು ವಜಾಗೊಳಿಸಿದ ಜೂನ್ 30 ರ ಏಕ ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ (ಹಿಂದೆ ಟ್ವಿಟರ್) ಸಲ್ಲಿಸಿದ ಮೇಲ್ಮನವಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ವಿಜಯಕುಮಾರ್ ಎ ಪಾಟೀಲ್ ಅವರ ವಿಭಾಗೀಯ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಸಚಿವಾಲಯ ಫೆಬ್ರವರಿ 2, 2021 ಮತ್ತು ಫೆಬ್ರವರಿ 28, 2022 ರ ನಡುವೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ 1,474 ಖಾತೆಗಳು, 175 ಟ್ವೀಟ್‌ಗಳು, 256 ಯುಆರ್ ಎಲ್ ಮತ್ತು ಒಂದು ಹ್ಯಾಶ್‌ಟ್ಯಾಗ್ ನ್ನು ನಿರ್ಬಂಧಿಸಲು X ಗೆ ನಿರ್ದೇಶಿಸುವ 10 ಸರ್ಕಾರಿ ಆದೇಶಗಳನ್ನು ಹೊರಡಿಸಿದೆ. ಈ ಪೈಕಿ 39 ಯುಆರ್ ಎಲ್ ಗಳಿಗೆ ಸಂಬಂಧಿಸಿದ ಆದೇಶಗಳನ್ನು ಟ್ವಿಟರ್ ಪ್ರಶ್ನಿಸಿದೆ.

“ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಿ. ಇಂದಿನ ಶಾಲೆಗೆ ಹೋಗುವ ಮಕ್ಕಳು ಇದಕ್ಕೆ ತುಂಬಾ ವ್ಯಸನಿಯಾಗಿದ್ದಾರೆ. ಅಬಕಾರಿ ನಿಯಮಗಳಂತಹ ವಯಸ್ಸಿನ ಮಿತಿ ಇರಬೇಕು ಎಂದು ನಾನು ಭಾವಿಸುತ್ತೇನೆ” ಎಂದು ನ್ಯಾಯಮೂರ್ತಿ ಜಿ ನರೇಂದರ್ ಹೇಳಿದರು. ಮಕ್ಕಳಿಗೆ 17 ಅಥವಾ 18 ವರ್ಷ ಇರಬಹುದು. ಆದರೆ ರಾಷ್ಟ್ರದ ಹಿತಾಸಕ್ತಿ ಯಾವುದು ಅಥವಾ ಯಾವುದು ಅಲ್ಲ ಎಂಬುದನ್ನು ನಿರ್ಣಯಿಸುವ ಪ್ರಬುದ್ಧತೆ ಅವರಿಗೆ ಇದೆಯೇ? ಎಂದು ಪ್ರಶ್ನಿಸಿದರು, ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರವಲ್ಲ, ಇಂಟರ್ನೆಟ್‌ನಲ್ಲಿನ ವಿಷಯಗಳನ್ನು ತೆಗೆದುಹಾಕಬೇಕು. ಮನಸ್ಸನ್ನು ಭ್ರಷ್ಟಗೊಳಿಸುತ್ತದೆ, ಸಾಮಾಜಿಕ ಮಾಧ್ಯಮಗಳ ಬಳಕೆಗೆ ವಯಸ್ಸಿನ ಮಿತಿಯನ್ನು ತರುವುದನ್ನು ಸರ್ಕಾರ ಪರಿಗಣಿಸಬೇಕು ಎಂದರು.

ಬಳಕೆದಾರರಿಗೆ ಅವರ ಟ್ವೀಟ್‌ಗಳು ಮತ್ತು ಖಾತೆಗಳನ್ನು ನಿರ್ಬಂಧಿಸುವ ಬಗ್ಗೆ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ಸಚಿವಾಲಯ ತಿಳಿಸಿಲ್ಲ ಎಂದು ವಾದಿಸಿದ X Corp ಪರ ವಕೀಲರ ಮೇಲೆ ನ್ಯಾಯಾಲಯವು 50 ಲಕ್ಷ ರೂಪಾಯಿಗಳ ವೆಚ್ಚವನ್ನು ವಿಧಿಸಿದೆ. “ನೀವು ಆದೇಶವನ್ನು ಬಿಡುಗಡೆ ಮಾಡಬೇಡಿ. ಆದೇಶವನ್ನು ಬಹಿರಂಗಪಡಿಸಲು ಅವರಿಗೆ ಅನುಮತಿ ಇಲ್ಲ. ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ?” ಎಂದು ಹೈಕೋರ್ಟ್ ಸರ್ಕಾರವನ್ನು ಕೇಳಿದೆ.

ಎಕ್ಸ್ ಕಾರ್ಪ್ ಕೋರಿರುವ ಮಧ್ಯಂತರ ಪರಿಹಾರ ಕುರಿತು ಬುಧವಾರ ನಿರ್ಧರಿಸಿರುವುದಾಗಿ ಹೇಳಿದ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ಅಂದಿಗೆ ಮುಂದೂಡಿತು. ಆ ಬಳಿಕ ಮೇಲ್ಮನವಿಯ ವಿಚಾರಣೆ ನಡೆಯಲಿದೆ ಎಂದು ಹೈಕೋರ್ಟ್ ಹೇಳಿದೆ.

LEAVE A REPLY

Please enter your comment!
Please enter your name here