ಬೆಂಗಳೂರು : ಬಹುಕೋಟಿ ಬಿಟ್ ಕಾಯಿನ್ ಹಗರಣ ಪ್ರಕರಣದ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮೇಲಿನ ಸಂಘಟಿತ ಅಪರಾಧಗಳ ಕಾಯ್ದೆಯನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶಿದೆ.
ಇದರಿಂದ ಶ್ರೀಕಿಗೆ ಬಿಗ್ ರಿಲೀಫ್ ಸಿಕ್ಕಿದೆ. ತನ್ನ ಮೇಲೆ ಸಂಘಟಿತ ಅಪರಾಧ ಕಾಯ್ದೆ ಅಡಿ ಕೇಸ್ ದಾಖಲಿಸಿರುವುದನ್ನು ಪ್ರಶ್ನಿಸಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಕೇಸ್‌ಗೂ ಮುಂಚಿನ ವರ್ಷಗಳಲ್ಲಿ ಎರಡು ಆರೋಪ ಪಟ್ಟಿಯಿದ್ದು, ಕಾಗ್ನಿಜೆನ್ಸ್ ನಿಯಮ ಪಾಲಿಸಿಲ್ಲ. ಜೊತೆಗೆ ಸಂಘಟಿತ ಅಪರಾಧ ಕಾಯ್ದೆ ಹೇಗೆ ಅನ್ವಯವೆಂದು ಪೊಲೀಸರು ಉಲ್ಲೇಖಿಸಿಲ್ಲ. ಹೀಗಾಗಿ ಸಂಘಟಿತ ಅಪರಾಧ ಕಾಯ್ದೆ ಅಂಶಗಳು ಇಲ್ಲಿ ಅನ್ವಯವಾಗುವುದಿಲ್ಲ ಎಂದು ಆದೇಶಿಸಿದೆ.
ಇನ್ನು ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು ವಾದ ಮಂಡಿಸಿ, ಜಾಮೀನು ಸಿಗದಂತೆ ಮಾಡಲು ಕೆಸಿಒಸಿ ಕಾಯ್ದೆ ಅನ್ವಯಿಸಲಾಗಿದೆ ಎಂದರು.