Home ಹಾವೇರಿ ಶಿಗ್ಗಾವಿ- ಸವಣೂರಿಗೆ ಸೆಮಿ ವೆಂಟಿಲೇಟರ್ ಹಸ್ತಾಂತರಿಸಿದ ಸಚಿವ ಬಸವರಾಜ ಬೊಮ್ಮಾಯಿ

ಶಿಗ್ಗಾವಿ- ಸವಣೂರಿಗೆ ಸೆಮಿ ವೆಂಟಿಲೇಟರ್ ಹಸ್ತಾಂತರಿಸಿದ ಸಚಿವ ಬಸವರಾಜ ಬೊಮ್ಮಾಯಿ

80
0

ಶ್ರೀಮತಿ ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಕೊಡುಗೆ

ಹಾವೇರಿ:

ವೆಂಟಿಲೇಟರ್ ಗೆ ಪರ್ಯಾಯವಾಗಿ ತಯಾರಿಸಲಾಗಿರುವ 4 ಸೆಮಿ ವೆಂಟಿಲೇಟರ್ ಉಪಕರಣಗಳನ್ನು ಶ್ರೀಮತಿ ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಹಾವೇರಿ ಜಿಲ್ಲಾಡಳಿತಕ್ಕೆ ಇಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ ಹಸ್ತಾಂತರಿಸಿದರು.

ಶುಕ್ರವಾರ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಜೊತೆ ಜಿಲ್ಲಾಧಿಕಾರಿಗಳೊಂದಿಗೆ ಕೋವಿಡ್ ಸ್ಥಿತಿಗತಿ ಕುರಿತು ಸಭೆ ನಡೆಸಿದ ಸಂದರ್ಭದಲ್ಲಿ ಈ ಉಪಕರಣಗಳನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ್ ಬೊಮ್ಮಾಯಿ , ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಒಟ್ಟು ನಾಲ್ಕು ಸೆಮಿ ವೆಂಟಿಲೇಟರ್ ಗಳನ್ನು ನೀಡಲಾಗಿದೆ. ಶಿಗ್ಗಾವಿ ಮತ್ತು ಸವಣೂರಿಗೆ ಊರಿಗೆ ತಲಾ 2 ರಂತೆ ವೆಂಟಿಲೇಟರ್ ಉಪಕರಣಗಳನ್ನು ಬಳಸುವಂತೆ ಸೂಚಿಸಲಾಗಿದೆ. ಇವು ವೆಂಟಿಲೇಟರ್ ಗೆ ಪರ್ಯಾಯವಾಗಿ ನಿರ್ಮಾಣವಾಗಿರುವ ಉಪಕರಣಗಳು. ವ್ಯಕ್ತಿಯ ಆಕ್ಸಿಜನ್ ( saturation) 80 ರಿಂದ 82 ಇರುವವರಿಗೆ ಈ ಉಪಕರಣವನ್ನು ಅಳವಡಿಸಿದರೆ, ಅವರ ಅಕ್ಜಿಜನ್ (saturation) ಲೆವಲ್ ನ್ನು 92ರವರೆಗೆ ನಿಯಂತ್ರಿಸುತ್ತದೆ. ಇದು ಬಳಕೆಗೆ ಸುಲಭವಾಗಿದೆ ಎಂದು ಅವರು ತಿಳಿಸಿದರು.

ಈಗಾಗಲೇ ಹಾವೇರಿ ಜಿಲ್ಲಾಡಳಿತ ಈ ರೀತಿಯ ಒಟ್ಟು 40 ಸೆಮಿ ವೆಂಟಿಲೇಟರ್ ಗಳನ್ನು ಖರೀದಿ ಮಾಡಿದೆ. ಅವು ಇನ್ನೆರಡು ದಿನಗಳಲ್ಲಿ ಹಾವೇರಿಗೆ ಬರಲಿವೆ . ಅವುಗಳ ಪೈಕಿ ಹಾವೇರಿಗೆ 10 ಹಾಗೂ ಇನ್ನುಳಿದ ವೆಂಟಿಲೇಟರ್ ಗಳನ್ನು ಪ್ರತಿ ತಾಲೂಕಿಗೆ 5 ರಂತೆ ಹಂಚಿಕೆ ಮಾಡುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here