ಬೆಂಗಳೂರು, ಮಾ.21: “ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲೇ ಅತಿ ಹೆಚ್ಚು ಯುವ, ಮಹಿಳಾ, ವಿದ್ಯಾವಂತ, ಪ್ರಜ್ಞಾವಂತರಿಗೆ, ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಇವರೆಲ್ಲಾ ಈ ಬಾರಿ ಗೆದ್ದು ಭವಿಷ್ಯದಲ್ಲಿ ಪಕ್ಷದ ದೊಡ್ಡ ನಾಯಕರಾಗಿ ಬೆಳೆಯುತ್ತಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಅವರು ಹೇಳಿದ್ದಿಷ್ಟು;
ಕೇವಲ ಸಚಿವರ ಮಕ್ಕಳಿಗೆ ಟಿಕೆಟ್ ನೀಡಿದ್ದು, ಕಾರ್ಯಕರ್ತರಿಗೆ ನೀಡಿಲ್ಲ ಎಂದು ಕೇಳಿದಾಗ “ಕಾರ್ಯಕರ್ತರಿಗೂ ಟಿಕೆಟ್ ನೀಡಿದ್ದೇವೆ. ಯಾರು ಟಿಕೆಟ್ ಕೇಳಿದ್ದಾರೋ ಅವರಿಗೆ ನೀಡಿದ್ದೇವೆ. ಯಾರು ಕೇಳುವುದಿಲ್ಲವೋ ಅವರಿಗೆ ನೀಡಲು ಆಗುವುದಿಲ್ಲ. ಮೊದಲು ಆಸಕ್ತಿ, ಛಲ ಇರಬೇಕು,” ಎಂದರು.