Home ಬೆಂಗಳೂರು ನಗರ ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ: ಬೆಂಗಳೂರಿನ ಕೆ.ಆರ್.ಪುರಂ ಸರ್ವೆ ಸೂಪರ್ ವೈಸರ್ ಕೆ ಟಿ...

ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ: ಬೆಂಗಳೂರಿನ ಕೆ.ಆರ್.ಪುರಂ ಸರ್ವೆ ಸೂಪರ್ ವೈಸರ್ ಕೆ ಟಿ ಶ್ರೀನಿವಾಸ್ ಮೂರ್ತಿಯವರ ಹಲವು ಮನೆಗಳ ಮೇಲೆ ಲೋಕಾಯುಕ್ತ ದಾಳಿ

53
0
Karnataka Lokayukta: Bengaluru KR Puram survey supervisor KT Srinivas Murthy house raided
Karnataka Lokayukta: Bengaluru KR Puram survey supervisor KT Srinivas Murthy house raided

ಬೆಂಗಳೂರು:

ನಗರದ ಲೋಕಾಯುಕ್ತ ಪೊಲೀಸರು ಇಂದು ಮಂಗಳವಾರ ಕೆ ಆರ್ ಪುರಂ ತಾಲ್ಲೂಕು ಕಚೇರಿಯ ಸರ್ವೆ ಸೂಪರ್ ವೈಸರ್ ಕೆ ಟಿ ಶ್ರೀನಿವಾಸ ಮೂರ್ತಿಯವರ ಹಲವು ಮನೆಗಳ ಮೇಲೆ ದಾಳಿ ನಡೆಸಿ ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಕೇಸನ್ನು ಕೆ ಟಿ ಶ್ರೀನಿವಾಸ ಮೂರ್ತಿಯವರ ದಾಖಲಿಸಲಾಗಿದ್ದು, ಇವರು 5 ಲಿಕ್ಕರ್ ಪರವಾನಗಿ ಪಡೆದುಕೊಂಡಿದ್ದರು ಎಂದು ತಿಳಿದುಬಂದಿದೆ. ಶ್ರೀನಿವಾಸ ಮೂರ್ತಿಗೆ ಸಂಬಂಧಪಟ್ಟ ಆಸ್ತಿ ಮತ್ತು ಮನೆಗಳನ್ನು ಒಳಗೊಂಡ 14 ಕಡೆಗಳಲ್ಲಿ ಬೆಂಗಳೂರು ಮತ್ತು ತುಮಕೂರುಗಳಲ್ಲಿ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ.

WhatsApp Image 2023 08 23 at 9.48.58 AM

ಇಂದು ಶೋಧದ ವೇಳೆ ಪತ್ತೆಯಾದ ಹೆಚ್ಚುವರಿ ಆಸ್ತಿಗಳು: ಹೆಣ್ಣೂರು ಗ್ರಾಮದಲ್ಲಿ 2,000 ಚದರ ಅಡಿ ನಿವೇಶನವಿದ್ದು ಇದರ ಮೌಲ್ಯ 83,45 ಲಕ್ಷ ರೂ, 60 ಲಕ್ಷ ಮೌಲ್ಯದ ಆ ನಿವೇಶನದಲ್ಲಿ ನೆಲಮಹಡಿ ಮತ್ತು 2 ಮಹಡಿಯಲ್ಲಿ, ಕೊತ್ತನೂರು ಗ್ರಾಮದಲ್ಲಿ 1,142 ಚದರ ಅಡಿ ನಿವೇಶನ 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ನೆಲಮಂಗಲ ತಾಲ್ಲೂಕಿನ ಲಕ್ಕೇನಹಳ್ಳಿ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾದ ಮನೆಯನ್ನು ಕೂಡ ಶೋಧ ಮಾಡಲಾಗುತ್ತಿದ್ದು ಅದು ಅವರ ಅಕ್ಕನ ಗಂಡನ ಹೆಸರಿನಲ್ಲಿದೆ. ಶ್ರೀನಿವಾಸ ಮೂರ್ತಿಯವರು ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸವನ್ನು ಕೂಡ ಇರಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here