Karnataka Lokayukta trapped BBMP health officer while accepting Rs 30,000 bribe
ಬೆಂಗಳೂರು:
ಲಂಚ ಸ್ವೀಕರಿಸುತ್ತಿದ್ದಾಗ ಆರೋಗ್ಯ ವೈದ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶಿವೇಗೌಡ. ವಿ ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದ ಆರೋಗ್ಯ ವೈದ್ಯಾಧಿಕಾರಿ. ಶ್ರೀನಿವಾಸ್ ಎಂಬುವವರು ಸೊಳ್ಳೆ ನಿಯಂತ್ರಣಕ್ಕಾಗಿ ಟೆಂಡರ್ ಪಡೆದಿದ್ದರು. ಇದಕ್ಕಾಗಿ ವೈದ್ಯಾಧಿಕಾರಿ ಶಿವೇಗೌಡ ಅವರು, ಶ್ರೀನಿವಾಸ್ ಎಂಬುವವರು 80 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ಶ್ರೀನಿವಾಸ್ ಅವರು ದೂರು ನೀಡಿದ್ದು, ಅದರಂತೆ ಶಿವೇಗೌಡ ಅವರು ಮುಂಗಡ ಹಣವಾಗಿ 30 ಸಾವಿರ ರುಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಶಿವೇಗೌಡ ಅವರನ್ನು ಹಲಸೂರಿನ ಕಚೇರಿಯಲ್ಲಿ ರೆಡ್ ಹ್ಯಾಂಡಾಗಿ ಲಂಚದ ಸಮೇತ ಲೋಕಾಯುಕ್ತ ಅಧಿಕಾರಿಗಳು ಬಲೆಗೆ ಬೀಳಿಸಿದ್ದಾರೆ. ಶಿವೇಗೌಡ ಅವರು, ಸಿವಿ ರಾಮನ್ ನಗರ ಬಿವಿಎಂಪಿ ಹೆಲ್ತ್ ಆಫೀಸರ್ ಎಂದು ತಿಳಿದು ಬಂದಿದೆ.
