Home Uncategorized Karnataka-Maharashtra Border Dispute: ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರನ್ನು ರಾಜ್ಯಕ್ಕೆ ಬರಲು ಬಿಡಲ್ಲ: ಆರ್​. ಅಶೋಕ

Karnataka-Maharashtra Border Dispute: ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರನ್ನು ರಾಜ್ಯಕ್ಕೆ ಬರಲು ಬಿಡಲ್ಲ: ಆರ್​. ಅಶೋಕ

65
0

ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Karnataka-Maharashtra border dispute) ತಾರಕಕ್ಕೇರಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರದ ಇಬ್ಬರು ಸಚಿವರು ನಾಳೆ. ಡಿ. 6 ರಂದು ರಾಜ್ಯಕ್ಕೆ ಬರುವ ಸಾಧ್ಯತೆ ಇದೆ. ಆದರೆ ಈ ಸಚಿವರನ್ನು ಯಾವುದೇ ಕಾರಣಕ್ಕೂ ರಾಜ್ಯಕ್ಕೆ ಬರಲು ಬಿಡಲ್ಲ ಎಂದು ಕಂದಾಯ ಸಚಿವ ಆರ್​.ಅಶೋಕ್ (R Ashok) ಖಡಕ್​ ಸೂಚನೆ ರವಾನಿಸಿದ್ದಾರೆ.

ಇಂದು (ಡಿ.5) ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮಹಾರಾಷ್ಟ್ರದಲ್ಲಿ ಎಂಇಎಸ್​​ ವರ್ಚಸ್ಸು ಕಡಿಮೆ ಆಗುತ್ತಿದ್ದಂತೆ ಈ ರೀತಿ ಮಾಡುತ್ತಿದ್ದಾರೆ. ಅವರಿಗೆ ಈವೆಂಟ್ ಇಲ್ಲದಾಗ ಕ್ಯಾತೆ ತೆಗೆಯುತ್ತಾರೆ. ಮಹಾಜನ್ ವರದಿ ಅಂತಿಮ ಅಂತ ಸುಪ್ರೀಂ ಕೋರ್ಟ್​​ನಲ್ಲಿ ಕೂಡ ಸ್ಪಷ್ಟವಾಗಿದೆ. ದಾಖಲೆ, ಜನಾಭಿಪ್ರಾಯ ಎಲ್ಲವೂ ನಮ್ಮ ಕಡೆ ಇದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ನಾವು ಯಾವುದೇ ಸಂಘರ್ಷ ಮಾಡಲು ಬೆಳಗಾವಿಗೆ ಬರುತ್ತಿಲ್ಲ, ಡಿಸೆಂಬರ್​ 6ರಂದು ಹೋಗಿಯೇ ತೀರುತ್ತೇವೆ -ಗಡಿ ಸಚಿವ ಚಂದ್ರಕಾಂತ ಪಾಟೀಲ್

ಶಿವಸೇನೆ ನಾಟಕದ ಕಂಪನಿ

ಶಿವಸೇನೆ ನಾಟಕದ ಕಂಪನಿ, ಹೀಗಾಗಿ ಆಗಾಗ ಈ ರೀತಿ ನಾಟಕ ಮಾಡುತ್ತಾರೆ. ನೆಲ, ಜಲ ವಿಚಾರ ಬಂದಾಗ ನಮ್ಮ ಸರ್ಕಾರ ಬದ್ಧವಾಗಿದೆ. ನಾವು ನೆಲ, ಜಲವನ್ನು ಬಿಟ್ಟು ಕೊಡುವ ಪ್ರಶ್ನೆ ಇಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ಇರುವಾಗ ಈ ರೀತಿ ಮಾಡಬಾರದು. ಸಚಿವರನ್ನು ಕಳಿಸುತ್ತಿರುವುದಕ್ಕೆ ಪ್ರತಿಯಾಗಿ ನಾವು ಸ್ಟ್ರಾಟರ್ಜಿ ಮಾಡುತ್ತೇವೆ. ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಲು ಬೆಳಗಾವಿ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಇದೆಲ್ಲಾ ಎಲೆಕ್ಷನ್ ಸ್ಟಂಟ್, ಅದಕ್ಕೆ ಯಾರೂ ಬೆಲೆ ಕೊಡಲ್ಲ. ಮಹಾರಾಷ್ಟ್ರದಿಂದ ಬರುವ ಸಚಿವರು ಸ್ಟಂಟ್ ಮಾಸ್ಟರ್ಸ್. ಸವಾಲಿಗೆ ಪ್ರತಿ ಸವಾಲು ಅಂತಾದರೆ ನಾವೂ ಮಾಡುತ್ತೇವೆ ಎಂದು ತಿಳಿಸಿದರು.

ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್​​

ಬೆಳಗಾವಿ: ನಾಳೆ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ಸಾಧ್ಯತೆ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್​​ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ 21 ಕಡೆ ಚೆಕ್​ಪೋಸ್ಟ್ ಸ್ಥಾಪಿಸಲಾಗಿದೆ. ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್​ಪೋಸ್ಟ್​​ನಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.

5 ಡಿಆರ್​ ತುಕಡಿ ಸೇರಿ 450ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಬೆಂಗಳೂರು-ಪುಣೆ ಹೆದ್ದಾರಿಯಲ್ಲೂ ಪೊಲೀಸ್ ಬಂದೋಬಸ್ತ್​​ ಕೈಗೊಳ್ಳಲಾಗಿದೆ. ಬೆಳಗಾವಿ ಎಸ್​ಪಿ ಡಾ.ಸಂಜೀವ ಪಾಟೀಲ್ ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿದೆ.

ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು  ಇಲ್ಲಿ ಕ್ಲಿಕ್  ಮಾಡಿ

LEAVE A REPLY

Please enter your comment!
Please enter your name here