ಬೆಂಗಳೂರು:
ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಜೆಟ್ ಸಭೆ ಹಿನ್ನೆಲೆಯಲ್ಲಿ ರೇಷ್ಮೆ ಬೆಳೆಗಾರರು, ರೀಲರ್ಸ್‌ಗಳ ಜೊತೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ವಿಕಾಸಸೌಧದಲ್ಲಿ ಇಂದು ಪೂರ್ವಭಾವಿ ಸಭೆ ನಡೆಸಿದರು.
ಕರ್ನಾಟಕದಲ್ಲಿ ರೇಷ್ಮೆಗೆ ಉತ್ತಮ ವಾತಾವರಣವಿದ್ದು, ರೇಷ್ಮೆ ಬೆಳೆಗಾರರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಬಜೆಟ್‌ಗೂ ಮುನ್ನ ಸಚಿವ ಡಾ. ನಾರಾಯಣಗೌಡ ಅವರು ಸಭೆ ನಡೆಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ರೇಷ್ಮೆ ಬೆಳೆಗಾರರು, ರೇಷ್ಮೆ ರೀಲರ್ಸ್‌ಗಳು ಹಲವು ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿದರು.
ಇದೇ ವೇಳೆ ರೇಷ್ಮೆ ಇಲಾಖೆ ತುಂಬಾ ಕ್ರಿಯಾಶೀಲವಾಗಿರುವುದು ತುಂಬಾ ಖುಷಿ ಆಗಿದೆ ಎಂದು ರೇಷ್ಮೆ ಬೆಳೆಗಾರರು, ರೀಲರ್ಸ್‌ಗಳು ಸಚಿವ ಡಾ.ನಾರಾಯಣ ಗೌಡ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರೇಷ್ಮೆ ಬೆಳೆಗಾರರ ಸಲಹೆ ಮತ್ತು ಬೇಡಿಕೆಗಳು
- ರೇಷ್ಮೆ ಕೃಷಿ 3 ಲಕ್ಷ ಕೋಟಿ ಬಂಡವಾಳ ಹೊಂದಿರುವ ಉದ್ಯಮವಾಗಿದೆ.
- 53 ಕೋಟಿ ಮಾನವ ದಿನಗಳನ್ನು ಸೃಷ್ಟಿಸುವ ಉದ್ಯಮ.
- ಸುಮಾರು 50 ಸಾವಿರ ಕೋಟಿ ರೂಪಾಯಿನಷ್ಟು GDPಗೆ ಕೊಡುಗೆ ನೀಡುತ್ತಿದೆ.
- ರೇಷ್ಮೆ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು, ಮೂಲ ತಳಿಯನ್ನು ಉಳಿಸಿಕೊಳ್ಳಬೇಕು.
- CSB ಕಾಯ್ದೆಯನ್ನು(2006) ತಿದ್ದುಪಡಿ.
- ನೂಲು ಬಿಚ್ಚಾಣಿಕೆದಾರರಿಗೆ 250 ಕೋಟಿ ರಿವಾಲ್ವಿಂಗ್ ಫಂಡ್ ನೀಡಬೇಕು.
-ಓಕುಳಿಪುರಂನಲ್ಲಿ ಕಚ್ಚಾ ರೇಷ್ಮೆ ಮಾರುಕಟ್ಟೆ ಮಾಡಬೇಕು. - Special Sericulture Economic Zone ಘೋಷಣೆ ಮಾಡಬೇಕು.
- ಬಸವರಾಜ್ ಸಮಿತಿ ವರದಿಯಂತೆ ರೇಷ್ಮೆಗೆ ಕನಿಷ್ಠ ಬೆಂಬಲ ಬೆಲೆ ಘೊಷಣೆ ಮಾಡಬೇಕು.
- ಕರ್ನಾಟಕದ ನಾಲ್ಕು ಭಾಗಗಳಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಿಸಬೇಕು.
- ನಾಲ್ಕು ಭಾಗದಲ್ಲಿ ರೇಷ್ಮೆ ಕೋಲ್ಡ್ ಸ್ಟೋರೇಜ್ ನಿರ್ಮಿಸಬೇಕು.
- ರೇಷ್ಮೆ ತೋಟ ಉಳುಮೆಗೆ ಮಿನಿ ಟ್ರ್ಯಾಕ್ಟರ್.
- ರೇಷ್ಮೆ ಬೆಳೆಗಾರರಿಗೆ ವಿಮೆ.
- ರೇಷ್ಮೆ ಮಂಡಿಗಳಿಗೆ ಕಡಿವಾಣ ಹಾಕಬೇಕು.
- ರೇಷ್ಮೆಬೆಳೆಗೆ ತಗಲುವ ರೋಗಗಳನ್ನು ನಿಯಂತ್ರಿಸಬೇಕು.
-ಬೈವೋಲ್ಟಿನ್ ರೇಷ್ಮೆ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ನೀಡಬೇಕು. - ರೀಲರ್ಸ್‌ಗಳಿಗೆ ಸಾಲ ಯೋಜನೆ ರೂಪಿಸಬೇಕು.
3 ಲಕ್ಷ ಕೋಟಿ ಬಂಡವಾಳ ಹೊಂದಿರುವ ರೇಷ್ಮೆ ಕೃಷಿ-ಉದ್ಯಮ ರಕ್ಷಣೆಗೆ ಬದ್ದ
ಬಜೆಟ್ ಹಿನ್ನೆಲೆಯಲ್ಲಿ ಇಂದು ರೇಷ್ಮೆ ಇಲಾಖೆಗೆ ಸಂಬಂಧಿಸಿದಂತೆ ಕರೆದಿದ್ದ ಸಭೆಯಲ್ಲಿ ಹಲವರು ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ತಿಳಿಸಿ, ಹಲವು ಸಲಹೆಗಳನ್ನು ನೀಡಿದ್ದಾರೆ. ರೇಷ್ಮೆ ಇಲಾಖೆಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ರೇಷ್ಮೆಗೆ 1200 ರೂಪಾಯಿ ಬೆಲೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲೂ ಉತ್ತಮ ಅನುದಾನ ಸಿಗುವ ನಿರೀಕ್ಷೆಯಿದ್ದು, ಮತ್ತಷ್ಟು ಶಕ್ತಿ ಬರಲಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.