Home ಮಂಗಳೂರು Karnataka Minister Madhu Bangarappa | ಜೆಡಿಎಸ್ ನಿಂದ ಬಹಳಷ್ಟು ಜನರು ಬರುವ ವಾತಾವರಣವಿದೆ: ಸಚಿವ...

Karnataka Minister Madhu Bangarappa | ಜೆಡಿಎಸ್ ನಿಂದ ಬಹಳಷ್ಟು ಜನರು ಬರುವ ವಾತಾವರಣವಿದೆ: ಸಚಿವ ಮಧು ಬಂಗಾರಪ್ಪ

161
0
Karnataka Minister Madhu Bangarappa | There is an atmosphere where many people are coming from JDS to join congress
Karnataka Minister Madhu Bangarappa | There is an atmosphere where many people are coming from JDS to join congress

ಮಂಗಳೂರು:

ಜೆಡಿಎಸ್ ನಲ್ಲಿರುವ ಕೆಲವು ಮುಖಂಡರು ಸಂಪರ್ಕದಲ್ಲಿದ್ದಾರೆ. ಮಂಗಳೂರಿನಲ್ಲಿ ಮಾತ್ರವಲ್ಲದೆ, ರಾಜ್ಯದಲ್ಲಿರುವ ಬಹಳಷ್ಟು ಜನರು ಜೆಡಿಎಸ್ ತೊರೆದು ಕಾಂಗ್ರೆಸ್ ‌ಬರುವ ವಾತಾವರಣ ಇದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

ಇಂದು ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಜೆಡಿಎಸ್ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದೆ.‌ ಹೀಗಾಗಿ ಸ್ವಾಭಾವಿಕವಾಗಿ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿದ್ದವರಿಗೆ ನೋವಾಗುತ್ತದೆ. ಹೀಗಾಗಿ ಅವರೆಲ್ಲರೂ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ. ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವುದು ರಾಜ್ಯಕ್ಕೆ ಒಳ್ಳೆಯದು. ಮಂಗಳೂರಿನಲ್ಲಿ ಸಾಕಷ್ಟು ಜನರು ನನ್ನ ಸ್ನೇಹಿತರಿದ್ದಾರೆ. ಎಲ್ಲ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ನಾನು ವೈಯಕ್ತಿಕವಾಗಿ ಯಾರ ಹೆಸರು ಹೇಳುವುದಿಲ್ಲ ಎಂದರು.

ರಾಜಕೀಯದಲ್ಲಿ ಬದಲಾವಣೆಗಳಾಗುತ್ತವೆ. ಆದರೆ ಮತದಾರರನ್ನು ಸುಲಭವಾಗಿ ತೆಗೆದುಕೊಳ್ಳಬೇಡಿ ಎಂದರು.

ಜನರ ವಿಶ್ವಾಸ ಬಹುಮುಖ್ಯ. ಮಂಗಳೂರಿನ ಜನರ ಮೇಲೆ ನನಗೆ ವಿಶ್ವಾಸವಿದೆ.‌ ಇಲ್ಲಿನ‌ ಜನರ ಮನಸ್ಸು ಗೆಲ್ಲಲು ಅವಕಾಶವಿದೆ. ನಾವು ಎಲ್ಲರೂ ಒಗ್ಗಟ್ಟಾಗಿ ಹೋಗುತ್ತೇವೆ.‌ ಕಳೆದ ಬಾರಿಯ ಲೋಕಸಭಾ ಚುನಾವಣೆಯ ಸೋಲಿನ‌ ಪರಾಮರ್ಶೆ ಮಾಡಿಕೊಳ್ಳುತ್ತೇವೆ. ಯಾರನ್ನೇ ಅಭ್ಯರ್ಥಿಯನ್ನು ಕೊಡುತ್ತಾರೆ? ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.

LEAVE A REPLY

Please enter your comment!
Please enter your name here