
ಬಿಜಾಪುರ ಮೂಲದ ಕಾಂಚನಾ ಅವರು ವಿದ್ಯಾಭ್ಯಾಸ ಮುಂದುವರಿಸಲು ಕೂಡಲೇ ಕಾಲೇಜು ಅಡ್ಮಿಷನ್ ಶುಲ್ಕ ಕಟ್ಟಲು ಪರದಾಡುತ್ತಿದ್ದ ವೇಳೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಅವರು ನೆರವಾಗಿದ್ದಾರೆ. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಬೆಂಗಳೂರು ನಗರ ಘಟಕದ ರಾಜ್ಯ ಸಮಿತಿ ಸದಸ್ಯ ಸೋಮಶೇಖರ ಗಾಂಧಿ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬೆಂಗಳೂರು:
ವಿದ್ಯುನ್ಮಾನ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದ ಬಿಜಾಪುರ ಮೂಲದ ಕಾಂಚನಾ ಅವರು ವಿದ್ಯಾಭ್ಯಾಸ ಮುಂದುವರಿಸಲು ಕೂಡಲೇ ಕಾಲೇಜು ಅಡ್ಮಿಷನ್ ಶುಲ್ಕ ಕಟ್ಟಲು ಪರದಾಡುತ್ತಿದ್ದ ವೇಳೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಅವರು ನೆರವಾಗಿದ್ದಾರೆ.
ಕಳೆದ ಒಂದು ವಾರದಿಂದ ಕಾಲೇಜು ಫೀ ಕಟ್ಟಲು 50 ಸಾವಿರ ಹೊಂದಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದರು. ಪ್ರೆಸ್ ಕ್ಲಬ್ ಗೆ ಭೇಟಿ ನೀಡಿದ್ದ ಸಚಿವರಿಗೆ, ಆಕೆ ಸಮಸ್ಯೆಯನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ (ಕೆಯುಡಬ್ಲ್ಯುಜೆ) ಶಿವಾನಂದ ತಗಡೂರು ಅವರು ಗಮನಕ್ಕೆ ತಂದರು.

ಕಾಂಚನಾ ಪರಿಸ್ಥಿತಿ ಅರ್ಥೈಯಿಸಿಕೊಂಡ ಸಚಿವರು ಸ್ಥಳದಲ್ಲಿಯೇ 50 ಸಾವಿರ ನೆರವು ನೀಡುವ ಮೂಲಕ ಮಾನವೀಯತೆಯಿಂದ ಸ್ಪಂಧಿಸಿದರು.
ಮನವಿಗೆ ಸ್ಪಂದಿಸಿ ನೆರವು ನೀಡಿದ ಸಚಿವ ಮುರುಗೇಶ ನಿರಾಣಿ ಅವರಿಗೆ ಕೆಯುಡಬ್ಲ್ಯೂಜೆ ಕೃತಜ್ಞತೆ ಸಲ್ಲಿಸಿದೆ.
40 ಸಾವಿರ ನೆರವು: ಇದೇ ಸಂದರ್ಭದಲ್ಲಿ ಆಪತ್ಬಾಂಧವ ನಿಧಿಯಲ್ಲಿ ಸಂಗ್ರಹವಾಗಿದ್ದ 40 ಸಾವಿರ ಚೆಕ್ ನ್ನು ಇದೇ ಸಂದರ್ಭದಲ್ಲಿ ಕಾಂಚನಾ ಅವರಿಗೆ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಸ್ತಾಂತರಿಸಿದರು. ಅದನ್ನು ಅಕೌಂಟ್ ಗೆ ಜಮೆ ಮಾಡಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಘಟಕದ ರಾಜ್ಯ ಸಮಿತಿ ಸದಸ್ಯ ಸೋಮಶೇಖರ ಗಾಂಧಿ ಹಾಜರಿದ್ದರು.