ಔರಂಗಾಬಾದ್/ಬೆಂಗಳೂರು:
ಔರಂಗಬಾದ್ ನಲ್ಲಿರುವ ಮಹಾವೀರ ಜೈನ್ ಗೋಶಾಲೆಗೆ ಭೇಟಿನೀಡಿ ನಿರ್ವಹಣೆ ಗೋ ಶಾಲೆಗಳ ನಿರ್ವಹಣೆ ಕುರಿತು ಸಚಿವ ಪ್ರಭು ಚವ್ಹಾಣ್ ಚರ್ಚೆ ನಡೆಸಿದರು.
ಕಳೆದ ನೂರು ವರ್ಷಗಳಿಂದ ಜೈನ ಸಮುದಾಯದವರು ಗೋಶಾಲೆಯನ್ನು ಅತ್ಯಂತ ಶ್ರದ್ಧಾ ಭಕ್ತಿ ಪೂರ್ವಕವಾಗಿ ನಡೆಸುತ್ತಿದ್ದಾರೆ.
ಇದೇ ವೇಳೆ ಗೋಶಾಲೆಯ ವ್ಯವಸ್ಥಾಪಕರಿಂದ ಗೋಶಾಲೆಯ ವಿವರ, ಗೋಮೂತ್ರ ಹಾಗೂ ಸಗಣಿಯಿಂದ ತಯಾರಿಸುತ್ತಿರುವ ಉತ್ಪನ್ನಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ, ಹೆಚ್ಚಿನ ಮಾಹಿತಿ ಪಡೆದೆ. #ಔರಂಗಾಬಾದ್ | #Aurangabad | @CMofKarnataka | @BSBommai
— Prabhu Bhamla Chavan (@PrabhuChavanBJP) December 26, 2021
ಗೋವುಗಳ ಬಗ್ಗೆ ಜೈನ ಸಮುದಾಯದ ಪ್ರೀತಿ ಹಾಗೂ ಆರೈಕೆ ಕಂಡು ಸಚಿವರು ಸಂತೋಷ ವ್ಯಕ್ತ ಪಡಿಸಿದರು.
ಸುಮಾರು ನೂರಕ್ಕೂ ಹೆಚ್ಚು ಗೋವುಗಳನ್ನು ಇಲ್ಲಿ ಸಾಕಲಾಗಿದ್ದು ಔರಂಗಾಬಾದ್ ಸುತ್ತಮುತ್ತಲಿನ ರೈತಾಪಿ ವರ್ಗ ಹಸುಗಳನ್ನು ಕಸಾಯಿಖಾನೆಗೆ ಕೊಡದೆ ಮಹಾವೀರ್ ಗೋಶಾಲೆಗೆ ನೀಡುತ್ತಾರೆ. ಸರ್ಕಾರದ ಯಾವುದೇ ಅನುದಾನ ಇಲ್ಲದೆ ಕಳೆದ 100 ವರ್ಷಗಳಿಂದ ಸಮುದಾಯದ ಹಂತದಲ್ಲಿಯೇ ಗೋಶಾಲೆ ನಿರ್ವಹಿಸುತ್ತಿರುವುದು ಕಂಡು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಭೇಟಿಯ ಸಂದರ್ಭದಲ್ಲಿ ಗೋಶಾಲೆ ಮುಖ್ಯಸ್ಥರಾದ ಪ್ರಕಾಶ್ ಕಟಾರಿಯಾ ಗೋಶಾಲೆ ಕುರಿತು ಸಚಿವರಿಗೆ ಮಾಹಿತಿ ನೀಡಿದರು