ಬೆಂಗಳೂರು:
ಇಂಡಿಯಾ ಇನ್ನೋವೇಶನ್ ಶೃಂಗಸಭೆಗಳು 2005ರಿಂದ ಬೆಂಗಳೂರಿನಲ್ಲಿ ಏರ್ಪಡುತ್ತಿರುವ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, 19ನೆ ರಾಷ್ಟ್ರೀಯ ಸಮ್ಮೇಳನ 2023ರ ಆಗಸ್ಟ್ 17ರಿಂದ 19ರವರೆಗೆ ಬೆಂಗಳೂರಿನ ಮಾನ್ಯತಾ ಪಾರ್ಕ್‌ನಲ್ಲಿರುವ ಹೋಟೆಲ್ ಹಿಲ್ಟನ್‌ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಉದ್ಘಾಟಿಸಲು ಗ್ರಾಮೀಣಾಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಸಮ್ಮತಿಸಿದ್ದಾರೆ. ಸಂಸ್ಥೆಯ ಹಿಂದಿನ ಅಧ್ಯಕ್ಷರಾದ ಶ್ರೀ ಕ್ರಿಸ್ ಗೋಪಾಲಕೃಷ್ಣ ಅವರೊಂದಿಗೆ ಇಂದು ನಡೆದ ಸಭೆಯಲ್ಲಿ ಸಚಿವರಿಗೆ ಸಂಸ್ಥೆಯ ಚಟುವಟಿಕೆಗಳನ್ನು ವಿವರಿಸಲಾಯಿತು.
ಭಾರತವನ್ನು ಸ್ಪರ್ಧಾತ್ಮಕ ಜಾಗತಿಕ ಶಕ್ತಿಯನ್ನಾಗಿ ಮಾಡುವ ಕಾರ್ಯತಂತ್ರಗಳ ಸಹಯೋಗದೊಂದಿಗೆ ರಾಜ್ಯಗಳಲ್ಲಿನ ಆವಿಷ್ಕಾರಗಳನ್ನು ಮೂರು ದಿನಗಳಲ್ಲಿ ಪ್ರದರ್ಶಿಸಲಾಗುತ್ತದೆ. ಸಮ್ಮೇಳನದ ಜೊತೆಗೆ ಶೃಂಗಸಭೆಯು ಪ್ರಶಸ್ತಿ, ನಾವೀನ್ಯತೆ ಪ್ರದರ್ಶನ, ಉತ್ಪನ್ನ ಬಿಡುಗಡೆ ಅಲ್ಲದೆ ನಿಜ ಜೀವನದ ಸಮಸ್ಯೆಗಳ ಹ್ಯಾಕಥಾನ್‌ಗಳನ್ನು ಸಹ ಹೊಂದಿರುತ್ತದೆ.
ಸಭೆಯಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ರಮಣರೆಡ್ಡಿ ಪಾಲ್ಗೊಂಡಿದ್ದರು.