Karnataka Minister Thimmapura Spearheads Change: CL-7 Lodging Certificate now Includes Parking Factor
ಬೆಳಗಾವಿ ಸದನದಲ್ಲಿ ಬಾರ್ ಲೈಸನ್ಸ್ ಕುರಿತು ಕಾವೇರಿದ ಚರ್ಚೆ
ಬೆಳಗಾವಿ ಸುವರ್ಣಸೌಧ:
ಸದದಲ್ಲಿ ಬಾರ್ ಲೈಸೆನ್ಸ್ ನೀಡಿಕೆ ಸಂಬಂಧಿಸಿದಂತೆ ಕಾವೇರಿದ ಚರ್ಚೆ ಮಂಗಳವಾರ ವಿಧಾನನಸಭೆಯಲ್ಲಿ ನಡೆಯಿತು. ಸಿಎಲ್-7 ಸನ್ನದುಗಳ ನೀಡಿಕೆಯಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ; ಮನಸ್ಸಿಗೆ ಬಂದಂತೆ ನೀಡಲಾಗುತ್ತಿದೆ ಎಂಬ ಸದಸ್ಯರ ಆರೋಪಗಳಿಗೆ ಉತ್ತರಿಸಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ (Karnataka Minister R B Thimmapura) ಅವರು ನಿಯಮಗಳ ಅನುಸಾರವೇ ಸಿಎಲ್-7 ಬಾರ್ ಲೈಸೆನ್ಸ್ಗಳ ನೀಡಲಾಗಿದೆ. ಸಿಎಲ್-7 ಸನ್ನದುಗಳ ನೀಡಿಕೆಯ ಈಗಿರುವ ನಿಯಮಗಳಲ್ಲಿ ಲಾಡ್ಜಿಂಗ್ ವಿನ್ಯಾಸ ಎಷ್ಟಿರಬೇಕು ಮತ್ತು ಪಾರ್ಕಿಂಗ್ ಹೇಗಿರಬೇಕು ಎಂಬುದರ ಬಗ್ಗೆ ಯಾವುದೇ ಅಂಶಗಳಿಲ್ಲ.ಅದನ್ನು ಮುಂದಿನ ದಿನಗಳಲ್ಲಿ ಸೇರ್ಪಡೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಬಾರ್‌ಲೈಸೆನ್ಸ್ಗಳ ನೀಡಿಕೆಯಲ್ಲಿ ಮೀಸಲಾತಿ ಅನುಷ್ಠಾನ ವಿಚಾರ ಸರಕಾರದ ಗಮನದಲ್ಲಿದ್ದು,ಕಾನೂನು ತಂದು ಅನುಷ್ಠಾನಗೊಳಿಸುವುದಕ್ಕೆ ಕ್ರಮವಹಿಸಲಾಗುವುದು ಎಂದರು.
ಕೋಲಾರ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 56 ಸಿಎಲ್-7 ಸನ್ನದುಗಳನ್ನು ಮಂಜೂರು ಮಾಡಲಾಗಿದೆ. ಕೋಲಾರ ಜಿಲ್ಲೆಯ ಅಬಕಾರಿ ಅಧೀಕ್ಷಕ ರಂಗಪ್ಪ ಅವರ ಮೇಲಿನ ಆರೋಪಗಳ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳಿಂದ ವಿಚಾರಣೆ ನಡೆಸಿ ವರದಿ ತರಿಸಿಕೊಳ್ಳಲಾಗುವುದು;ವರದಿ ಆಧರಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
