
Karnataka Minister Zameer Ahmed Khan encouraged by giving Rs 1.50 lakh for sponsorship of job fair
ಬೆಂಗಳೂರು :
ಬಿಎಂಎಸ್ ಮಹಿಳಾ ಕಾಲೇಜು ವತಿಯಿಂದ ಆಯೋಜಿಸಿರುವ ಉದ್ಯೋಗ ಮೇಳ ಪ್ರಯೋಜಕತ್ವ ಮನವಿಗೆ ಸ್ಪಂದಿಸಿದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ವೈಯಕ್ತಿಕವಾಗಿ 1.50 ಲಕ್ಷ ರೂ. ನೀಡಿ ಪ್ರೋತ್ಸಾಹಿಸಿದರು.
ಜುಲೈ 21 ರಂದು ಆಯೋಜಿರುವ ಉದ್ಯೋಗ ಮೇಳಕ್ಕೆ ನಿರ್ವಹಣೆ ವೆಚ್ಚ ಹತ್ತು ಲಕ್ಷ ರೂ.ವೆಚ್ಚ ಆಗಲಿದ್ದು ಪ್ರಾಯೋಜಕತ್ವ ಕ್ಕಾಗಿ ವಿದ್ಯಾರ್ಥಿಗಳ ನಿಯೋಗ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿತು.
60 ಕಂಪನಿ ಗಳು ಮೇಳದಲ್ಲಿ ಭಾಗವಹಿಸುತ್ತಿದ್ದು 50 ಕಾಲೇಜುಗಳ 20 ಸಾವಿರ ಅಭ್ಯರ್ಥಿ ಗಳು ಮೇಳದಲ್ಲಿ ಭಾಗವಹಿಸುತ್ತಿರುವುದಾಗಿ ಮಾಹಿತಿ ನೀಡಿದರು.
ಇದಕ್ಕೆ ಸ್ಪಂದಿಸಿದ ಸಚಿವರು ವೈಯಕ್ತಿಕವಾಗಿ 1.50 ಲಕ್ಷ ರೂ. ಚೆಕ್ ನೀಡಿ ಶುಭ ಹಾರೈಸಿದರು. ನಂತರ ವಿದ್ಯಾರ್ಥಿಗಳ ಜತೆ ಊಟ ಸವಿದರು.