Home ರಾಜಕೀಯ DK Shivakumar | ಬಹಿರಂಗ ಹೇಳಿಕೆಗಳಿಂದ ಸಚಿವರು ಭವಿಷ್ಯ ಹಾಳು ಮಾಡಿಕೊಳ್ಳುವುದು ಬೇಡ: ಡಿಸಿಎಂ ಡಿ...

DK Shivakumar | ಬಹಿರಂಗ ಹೇಳಿಕೆಗಳಿಂದ ಸಚಿವರು ಭವಿಷ್ಯ ಹಾಳು ಮಾಡಿಕೊಳ್ಳುವುದು ಬೇಡ: ಡಿಸಿಎಂ ಡಿ ಕೆ ಶಿವಕುಮಾರ್

41
0
Karnataka Ministers should not spoil their future with open statements: DCM DK Shivakumar
Karnataka Ministers should not spoil their future with open statements: DCM DK Shivakumar

ಬೆಂಗಳೂರು:

ನಾನೂ ಸೇರಿದಂತೆ ಸಚಿವರುಗಳಿಗೆ ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್​ ಹೇಳಿದ್ದಾರೆ.

ಯಾವ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡುವುದು ಬೇಡ. ಐದು ವರ್ಷ ಜನ‌ ನಮಗೆ ಅಧಿಕಾರ ಕೊಟ್ಟಿದ್ದಾರೆ. ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಅವುಗಳ ಬಗ್ಗೆ ಹೆಚ್ಚಿನ ಗಮನ ಹರಿಸಲು ಹೇಳಿದ್ದೇವೆ‌. ಬಹಿರಂಗ ಹೇಳಿಕೆಗಳಿಂದ ಅವರ ಭವಿಷ್ಯ ಹಾಳು ಮಾಡಿಕೊಳ್ಳುವುದು ಬೇಡ. ಪಕ್ಷದ ಭವಿಷ್ಯ ಕೂಡ ಹಾಳು ಮಾಡುವುದು ಬೇಡ ಎಂದು ತಿಳಿಸಿದರು.

ಲೋಕಸಭೆ ಚುನಾವಣೆ ಸಂಬಂಧ ಆಕಾಂಕ್ಷಿಗಳ ಅಭ್ಯರ್ಥಿಗಳ ಪಟ್ಟಿ ಸಂಬಂಧ ನಾವು ಜಿಲ್ಲಾವಾರು ಪ್ಯಾನಲ್ ಮಾಡಲು ಸಚಿವರಿಗೆ ಹೇಳಿದ್ದೆವು‌. ಕೆಲವರು ಆಕಾಂಕ್ಷಿ ಅಭ್ಯರ್ಥಿಗಳ ಪಟ್ಟಿ ಕೊಟ್ಟಿದ್ದಾರೆ. ಇನ್ನೂ ಕೆಲವರು ವರದಿ ನಮಗೆ ಕೊಟ್ಟಿಲ್ಲ. ಅವರು ಆಕಾಂಕ್ಷಿಗಳ ಪಟ್ಟಿ ಕೊಟ್ಟ ಬಳಿಕ‌ ನಾವು ಸರ್ವೆ ಮಾಡಿಸಬೇಕು. ಮತದಾರರ ನಾಡಿಮಿಡಿತ ಪರೀಕ್ಷೆ ಮಾಡಿಸಬೇಕು. ಅದಕ್ಕೆ‌ ಸಚಿವರಿಗೆ ಸೂಚನೆ ನೀಡಿದ್ದೇವೆ” ಎಂದರು.

ಸಚಿವರಿಗೆ ಟಾಸ್ಕ್ ಕೊಟ್ಟಿದ್ದೇವೆ. ಲೋಕಸಭಾ ಚುನಾವಣೆ ಸಂಬಂಧ ಸಚಿವರುಗಳಿಗೆ ಅವರ ಉಸ್ತುವಾರಿ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗಳ ಉಸ್ತುವಾರಿ ಕೊಟ್ಟಿದ್ದೇವೆ. ಈ ವಾರದಲ್ಲಿ ವರದಿ ಕೊಡಲು ಹೇಳಿದ್ದೇವೆ. ಬಳಿಕ ಸರ್ವೆ ಮಾಡಿಸುತ್ತೇವೆ. ಜನವರಿಯಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ. ಅಭ್ಯರ್ಥಿಗಳಿಗೆ ಕೆಲಸ ಮಾಡಲು ಸೂಚನೆ ನೀಡಲಿದ್ದೇವೆ” ಎಂದು ಹೇಳಿದರು.

LEAVE A REPLY

Please enter your comment!
Please enter your name here