Home ರಾಜಕೀಯ ಚುನಾವಣೋತ್ತರ ಸಮೀಕ್ಷೆ: ಬೃಹತ್ ಬೆಂಗಳೂರಿನಲ್ಲಿ ಬಿಜೆಪಿಗೆ ಅಧಿಕ ಸ್ಥಾನ

ಚುನಾವಣೋತ್ತರ ಸಮೀಕ್ಷೆ: ಬೃಹತ್ ಬೆಂಗಳೂರಿನಲ್ಲಿ ಬಿಜೆಪಿಗೆ ಅಧಿಕ ಸ್ಥಾನ

51
0
Karnataka Post-election survey: BJP gains more seats in Greater Bengaluru
Karnataka Post-election survey: BJP gains more seats in Greater Bengaluru

ನವದೆಹಲಿ:

ಹೈವೋಲ್ಟೇಜ್ ಪ್ರಚಾರದ ನಂತರ, 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಅಂತಿಮವಾಗಿ ಬುಧವಾರ ಮತದಾನ ನಡೆಯಿತು. ರಾಜಕೀಯ ತಜ್ಞರು ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನ ವಿರೋಧ ಪಕ್ಷವಾದ ಕಾಂಗ್ರೆಸ್ ನಡುವೆ ನಿಕಟ ಸ್ಪರ್ಧೆ ಏರ್ಪಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಎಬಿಪಿ/ಸಿ-ವೋಟರ್ ಎಕ್ಸಿಟ್ ಪೋಲ್ ಪ್ರಕಾರ, ಬೃಹತ್ ಬೆಂಗಳೂರು ಪ್ರದೇಶದಲ್ಲಿ 32 ಸ್ಥಾನಗಳ ಪೈಕಿ ಬಿಜೆಪಿ 17 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಆದರೆ, ಕಾಂಗ್ರೆಸ್ 13 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಮತ್ತು ಜೆಡಿಎಸ್ (ಎಸ್) ಕೇವಲ 2 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ ಎನ್ನಲಾಗಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ, ಈ ಪ್ರದೇಶದಲ್ಲಿ ಬಿಜೆಪಿ 11 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 17 ಮತ್ತು ಜೆಡಿಎಸ್ 4 ಸ್ಥಾನಗಳನ್ನು ಪಡೆದಿತ್ತು.

2018ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್ ಸೋಲನುಭವಿಸಬಹುದು. ಆದರೆ, ಬಿಜೆಪಿ ಆರು ಹೆಚ್ಚುವರಿ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ.

ಕಾಂಗ್ರೆಸ್ ಶೇ 39.3 ರಷ್ಟು ಮತವನ್ನು ಪಡೆಯುವ ನಿರೀಕ್ಷೆಯಿದೆ. 2018 ರಲ್ಲಿ ಶೇ 40 ರಷ್ಟು ಪಾಲನ್ನು ಹೊಂದಿದ್ದ ಕಾಂಗ್ರೆಸ್, ಶೇ 0.7 ರಷ್ಟು ಕಡಿಮೆಯಾಗಿದೆ. ಕೇಸರಿ ಪಕ್ಷವು 2018 ರಲ್ಲಿ ಶೇ 39 ರಷ್ಟು ಮತವನ್ನು ಪಡೆದಿತ್ತು. ಇದೀಗ ಶೇ 44.7 ರಷ್ಟು ಮತ ಪಡೆದಿದೆ. ಅಂದರೆ ಶೇ 5.7 ರಷ್ಟು ಹೆಚ್ಚುವರಿ ಮತವನ್ನು ಪಡೆದಿದೆ.

2018ರಲ್ಲಿ ಶೇ 18ರಷ್ಟು ಮತಗಳನ್ನು ಪಡೆದಿದ್ದ ಜೆಡಿಎಸ್ ಈ ಬಾರಿ ಶೇ 13.1ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದ್ದು, ಶೇ.4.9ರಷ್ಟು ಕುಸಿತ ಕಂಡಿದೆ.

LEAVE A REPLY

Please enter your comment!
Please enter your name here