ಬೆಂಗಳೂರು:
ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಮತ್ತು ಸಮರ್ಥ ನೀರಿನ ನಿರ್ವಹಣೆಯನ್ನು ಖಾತರಿಪಡಿಸುವ ಮಹತ್ವದ ಕ್ರಮದಲ್ಲಿ, ರಾಜ್ಯ ಸರ್ಕಾರವು ಸೂಕ್ಷ್ಮ ನೀರಾವರಿ ನಿಧಿಯ ಅಡಿಯಲ್ಲಿ ಹಣಕಾಸಿನ ನೆÀರವು ಪÀಡೆಯಲು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಡಾ. ವಿಶಾಲ್ ಆರ್, ಕಾರ್ಯದರ್ಶಿ (ವಿತ್ತೀಯ ಸುಧಾರಣೆ), ಆರ್ಥಿಕ ಇಲಾಖೆ ಮತ್ತು ನಬಾರ್ಡ್‍ನ ಕರ್ನಾಟಕ ಪ್ರಾದೇಶಿಕ ಕಛೇರಿಯ ಮುಖ್ಯ ಜನರÀಲ್ ಮ್ಯಾನೇಜರ್, ಟಿ. ರಮೇಶ್ ರವರು ಒಪ್ಪಂದಕ್ಕೆ ಸಹಿ ಹಾಕಿದರು. ಸುಸ್ಥಿರ ಕೃಷಿಯತ್ತ ಮತ್ತು ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಈ ಒಪ್ಪಂದವು ಬೆಂಬಲಿಸುತ್ತದೆ.
ಮಾನ್ಯ ಮುಖ್ಯಮಂತ್ರಿಗಳು, ನಬಾರ್ಡ್ ಸಹಕಾರದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. “ಕೃಷಿ ಸುಸ್ಥಿರತೆಗೆ ನೀರಿನ ಸಂರಕ್ಷಣೆ ಮತ್ತು ಸಮರ್ಥ ನೀರಾವರಿ ಪದ್ಧತಿಗಳು ಅತ್ಯುನ್ನತವಾಗಿವೆ. ನಬಾರ್ಡ್ ಬೆಂಬಲದೊಂದಿಗೆ, ನಮ್ಮ ರೈತರಿಗೆ ನೀರಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರಾಜ್ಯದಲ್ಲಿ ಕೃಷಿ ಉತ್ಪಾದಕತೆಯನ್ನು ಹಚ್ಚಿಸಲು ನಾವು ಮಹತ್ವದ ಹಜ್ಜೆ ಇಡುತ್ತಿದ್ದೇವೆ” ಎಂದು ಮುಖ್ಯಮಂತ್ರಿಗಳು ಹೇಳಿದರು.
ಈ ಸಹಯೋಗವು ರಾಜ್ಯದಾದ್ಯಂತ ರೈತರು ನೀರಾವರಿ ಪದ್ದತಿಗಳನ್ನು ಅಳವಡಿಸಿಕೊಳ್ಳುವುದನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಕರ್ನಾಟಕವು ಮಳೆಯಾಶ್ರಿತ ಕೃಷಿಯ ಅಡಿಯಲ್ಲಿ ಮೂರನೇ ಎರಡಕ್ಕಿಂತ ಹೆಚ್ಚು ಪ್ರದೇಶವನ್ನು ಹೊಂದಿರುವ ರಾಜ್ಯವಾಗಿದೆ. 2.53 ಲಕ್ಷ ರೈತರ 2.72 ಲಕ್ಷ ಹೆಕ್ಟೇರ್ ಪ್ರದೇಶವನ್ನು ಈ ಯೋಜನೆಯಡಿ ರೂ. 290 ಕೋಟಿಗಳ ಹೆಚ್ಚಿನ ಮೊತ್ತದ ಸಬ್ಸಿಡಿಗಾಗಿ ಸಾಲವನ್ನು ಪಡೆಯಲು ಅಂದಾಜಿಸಲಾಗಿದೆ. ಇದಲ್ಲದೆ ಈ ಯೋಜನೆಯಡಿ ಭಾರತ ಸರ್ಕಾರದಿಂದ ರೂ. 360 ಕೋಟಿ ಮತ್ತು ಕರ್ನಾಟಕ ಸರ್ಕಾರದಿಂದ ರೂ. 240 ಕೋಟಿ ನಿಧಿ ದೊರೆಯುತ್ತದೆ. ಇದರಿಂದ ಒಟ್ಟು ರೂ 990 ಕೋಟಿಗಳ ಲಾಭವನ್ನು ನಮ್ಮ ರೈತರು ಪಡೆಯುತ್ತಾರೆ.
ಕರ್ನಾಟಕ ಸರ್ಕಾರಕ್ಕೆ ಸೂಕ್ಷ್ಮ ನೀರಾವರಿ ನಿಧಿಯಿಂದ ಹಣವನ್ನು ವಿತರಿಸಲು ನಬಾರ್ಡ್ ಬೆಂಬಲ ನೀಡುತ್ತದೆ. ಸೂಕ್ಷ್ಮ ನೀರಾವರಿ ವ್ಯವಸ್ಥೆಗಳನ್ನು ಅಳವಡಿಸಲು ರೈತರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ಬೆಂಬಲವನ್ನು ವಿಸ್ತರಿಸಲಾಗುವುದು.
ಸುದ್ದಿ ಮೂಲ: (ಕರ್ನಾಟಕ ವಾರ್ತೆ)