ನವದೆಹಲಿ/ಬೆಂಗಳೂರು:
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಬುಧವಾರ ದೆಹಲಿಯಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ರಾಜ್ಯದ ಹಲವು ಕಾಮಗಾರಿಗಳ ಬಗ್ಗೆ ಚರ್ಚಿಸಿದ್ದಾರೆ.
ಶಿರಾಡಿ ಘಾಟ್ ಸುರಂಗ ನಿರ್ಮಾಣ,ಗೋಕಾಕ್ ನಗರದಲ್ಲಿ ಎಲಿವೇಟೆಡ್ ಕಾರ್ಡ್ ನಿರ್ಮಾಣ,ಬೆಳಗಾವಿ ನಗರದ ಹಳೆಯ NH 4 ನ ಪುಣೆ ಬೆಂಗಳೂರು ರಸ್ತೆಯಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಸೇರಿದಂತೆ ರಾಜ್ಯದ 20 ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಜೊತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಚರ್ಚಿಸಿದ್ದಾರೆ.
Union Minister Shri @nitin_gadkari Ji, along with PWD Minister of Karnataka Shri @JarkiholiSatish Ji and Karnataka MPs, reviewed the progress of ongoing NH development projects in the state of Karnataka. pic.twitter.com/7SDJxkWPFa
— Office Of Nitin Gadkari (@OfficeOfNG) July 26, 2023
ನವದೆಹಲಿಯಲ್ಲಿ ಭೇಟಿಯಾದ ಅವರು ಯೋಜನೆಗಳಿಗೆ ವೇಗ ನೀಡಲು ಮನವಿ ಮಾಡಿದ್ದಾರೆ ಕೇಂದ್ರ ಸಚಿವರು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಯೋಚನೆಗಳ ರೂಪರೇಷೆ ಸಿದ್ಧಪಡಿಸಿ ಸಲ್ಲಿಸುವಂತೆ ತಿಳಿಸಿರುತ್ತಾರೆ ಎಂದು ಲೋಕೋಪಯೋಗಿ ಸಚಿವರು ಹೇಳಿದರು.