Home Uncategorized Karnataka Rain:ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಇನ್ನೂ 5 ದಿನ ಮಳೆ

Karnataka Rain:ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಇನ್ನೂ 5 ದಿನ ಮಳೆ

25
0

ಬೆಂಗಳೂರು: ತಮಿಳುನಾಡಿನಲ್ಲಿ ಮ್ಯಾಂಡಸ್‌ ಚಂಡಮಾರುತ ಕರ್ನಾಟಕದ ಮೇಲೂ ಪರಿಣಾಮ ಬೀರಿದೆ. ಕರ್ನಾಟಕದ ಹಲವೆಡೆ ಮಳೆಯ (Karnataka Rain) ಅಬ್ಬರ ಅಷ್ಟಾಗಿ ಇರದಿದ್ದರೂ ತುಂತುರು ಮಳೆಯಾಗುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮೋಡಕವಿದ ವಾತಾವರಣ ಇದ್ದು, ಶೀತಗಾಳಿ ಬೀಸುತ್ತಿದೆ. ಈ ಹಿನ್ನೆಲೆಯಲ್ಲಿ ಚಳಿಗೆ ಜನ ಥರಗುಟ್ಟಿದ್ದಾರೆ.  ಇದರ ಮಧ್ಯೆ ಇನ್ನೂ  5 ದಿನ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ತಜ್ಞ ಆರ್.ಪ್ರಸಾದ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಗಾಳಿ-ಮಳೆಯಿರಲಿ, ಕೊರೆಯುವ ಚಳಿಯಿರಲಿ; ಜನರಿಗೆ ಕೆಲಸಕ್ಕೆ ಹೋಗುವುದು ಮಾತ್ರ ತಪ್ಪದು!

ಈ ಬಗ್ಗೆ ಇಂದು(ಡಿಸೆಂಬರ್ 13) ಟಿವಿ9ಗೆ ಪ್ರತಿಕ್ರಿಯಿಸಿರುವ ಹವಮಾನ ಇಲಾಖೆ ತಜ್ಞ ಪ್ರಸಾದ್, ನಿನ್ನೆ((ಡಿಸೆಂಬರ್ 12)) ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ದಾವಣಗೆರೆಯಲ್ಲಿ 14 ಡಿಗ್ರಿ ಸೆಲ್ಸಿಯಸ್ ಕಡಿಮೆ ಉಷ್ಣಾಂಶ ದಾಖಾಲಾಗಿದೆ. ಸದ್ಯ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಇರುವ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ 5 ದಿನ ಮಳೆ ಇರಲಿದೆ. ದಕ್ಷಿಣ ಒಳನಾಡಿನ ಹಲವೆಡೆ ನಾಳೆ(ಡಿ.14) ಬಹುತೇಕ ಕಡೆ ಗುಡುಗು ಮಿಂಚಿನ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.

ಕರಾವಳಿಯ ಬಹುತೇಕ ಕಡೆ ಇಂದು ಮಳೆಯಾಗಿದ್ದು, ನಾಳೆಯೂ(ಡಿಸೆಂಬರ್ 14) ಗುಡುಗು ಸಹಿತ ಮಳೆಯಾಗಲಿದೆ. ಇನ್ನು ಬೆಂಗಳೂರಿನಲ್ಲಿ ಮೊಡಕವಿದ ವಾತಾವರಣ ಮುಂದುವರಿದಿದ್ದು, ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಇದನ್ನೂ ಓದಿ: ರಾಜ್ಯಾದ್ಯಂತ ಶೀತಗಾಳಿ, ಮಳೆ: ಉಸಿರಾಟದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ, ಆರೋಗ್ಯ ಸಚಿವರ ಸಲಹೆ ಪಾಲನೆ ಮಾಡುವುದು ಅವಶ್ಯ

ಡಿ.11ರಂದು ಗರಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇದ್ದು, ಒಂದು ಮೀ ಮೀಟರ್ ಮಳೆಯಾಗಿದೆ . ಅಕ್ಟೋಬರ್ 1 ರಿಂದ ಡಿಸೆಂಬರ್ 13 ರವರೆಗೂ 46 ಸೆಂ ಮೀಟರ್ ಮಳೆಯಾಗಿದೆ. ನಿನ್ನೆ(ಸೋಮವಾರ) ಹೆಚ್ ಎ ಎಲ್ ನಲ್ಲಿ 5 ಮಿಲಿ ಮೀಟರ್ ಮಳೆಯಾಗಿದೆ ಎಂದರು.

ಅಕ್ಟೋಬರ್ 1 ರಿಂದ ಡಿಸೆಂಬರ್ 13ರ ವೆರೆಗೂ 41 ಸೆಂ ಮೀ ಮಳೆಯಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5 ಮಿಲಿ ಮೀಟರ್ ಮಳೆಯಾಗಿದ್ದು ಗರಿಷ್ಠ ತಾಪಮಾನ 25.5 ಡಿಗ್ರಿ, ಕನಿಷ್ಟ ತಾಪಮಾನ. 19.5 ಕಂಡುಬಂದಿದೆ.

ಇಂದು ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಇದ್ದು, ಕನಿಷ್ಟ ತಾಪಾಮಾನ 19 ಡಿಗ್ರಿ ಕಂಡುಬಂದಿದೆ. ನಾಳೆಯು‌ ಮುಸುಕಿನ ಮೋಡ ಇರಲಿದ್ದು, ಗುಡುಗು ಮಿಂಚಿನ‌ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

LEAVE A REPLY

Please enter your comment!
Please enter your name here