ಬೆಂಗಳೂರು:
ರಾಜ್ಯದಲ್ಲಿ ಕೋವಿಡ್ ಲಸಿಕೆಯ ಕೊರತೆ ತಾಂಡವವಾಡುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರದ ಕೋಟಾದಲ್ಲಿ ಹೊಸದಾಗಿ ಲಸಿಕೆಗಳು ರಾಜ್ಯಕ್ಕೆ ಆಗಮಿಸಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಕೇಂದ್ರದಿಂದ ಒಟ್ಟು 12.91 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆ ರಾಜ್ಯಕ್ಕೆ ಆಗಮಿಸಿದೆ. ಜೊತೆಗೆ, ಇಲ್ಲಿಯವರೆಗೆ ರಾಜ್ಯ ಸರ್ಕಾರ ಒಟ್ಟು 1.44 ಲಕ್ಷ ಡೋಸ್ ಅನ್ನು ನೇರವಾಗಿ ಖರೀದಿಸಿದೆ ಎಂದು ಕೂಡ ಅವರು ಮಾಹಿತಿ ನೀಡಿದ್ದಾರೆ.
Karnataka received 1.25 lakh doses of COVAXIN today under the Central quota.
— Dr Sudhakar K (@mla_sudhakar) May 25, 2021
🔶 Total Covaxin doses received under Central quota is 12,91,280
🔶 Total Covaxin doses received under direct purchase is 1,44,170.
ತಮ್ಮ ಟ್ವೀಟ್ ನಲ್ಲಿ ಅವರು “ಕೇಂದ್ರ ಸರ್ಕಾರದ ಕೋಟಾದಡಿಯಲ್ಲಿ ಇಂದು 1.25 ಲಕ್ಷ ಡೋಸ್ ಕೋವ್ಯಾಕ್ಸಿನ್ ಕರ್ನಾಟಕಕ್ಕೆ ಬಂದಿದೆ. ಕೇಂದ್ರದಿಂದ ಪಡೆದ ಒಟ್ಟು ಕೋವ್ಯಾಕ್ಸಿನ್ ಡೋಸ್ 12,91,280. ರಾಜ್ಯವು ನೇರವಾಗಿ ಖರೀದಿಸಿದ ಒಟ್ಟು ಕೋವ್ಯಾಕ್ಸಿನ್ ಡೋಸ್ 1,44,170” ಎಂದು ಮಾಹಿತಿ ನೀಡಿದ್ದಾರೆ.