ಬಿಬಿಎಂಪಿ ವ್ಯಾಪ್ತಿಯಲ್ಲಿ 1,85,149 ಲಕ್ಷ ಲಸಿಕೆ ನೀಡಿಕೆ
ಬೆಂಗಳೂರು:
ರಾಜ್ಯದಲ್ಲಿ ಇಂದು ಒಂದೇ ದಿನ 11,80,627 ಕ್ಕೂ ಅಧಿಕ ಡೋಸ್ ಕೊರೊನಾ ಲಸಿಕೆ ಹಾಕುವ ಮೂಲಕ ದಾಖಲೆಯ ಲಸಿಕಾಕರಣ ನಡೆದಿದೆ.
ಬುಧವಾರ ರಾತ್ರಿ 10 ಗಂಟೆಯವರೆಗೆ, ಲಸಿಕೆ ಹಾಕುವವರೆಗೂ ಇತ್ತೀಚಿನ ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಹಂಚಿಕೊಂಡಿದ್ದಾರೆ.
ಇಂದು ಅತಿಹೆಚ್ಚು ಲಸಿಕೆಗಳನ್ನು ಹೊಂದಿರುವ ಜಿಲ್ಲೆಗಳು
- ಬಿಬಿಎಂಪಿ- 1,85,149
- ಬೆಳಗಾವಿ- 97,761
- ಮಂಡ್ಯ- 72,081
- ಮೈಸೂರು- 51,055
- ದಕ್ಷಿಣ ಕನ್ನಡ- 49,488
ಇಲ್ಲಿಯವರೆಗೆ ರಾಜ್ಯದಲ್ಲಿ ಮಾಡಲಾದ ಒಟ್ಟು ಲಸಿಕೆಗಳು: 4,36,08,688
ಇದಕ್ಕೂ ಮುನ್ನ, ಆರೋಗ್ಯ ಇಲಾಖೆಯು ಟ್ವೀಟ್ ಮಾಡಿ ಕರ್ನಾಟಕವು 11,36,980 ಡೋಸ್‌ಗಳನ್ನು ನೀಡಿದೆ ಎಂದು ಹೇಳಿಕೊಂಡಿದೆ.
Karnataka leads in today's Vaccination Drive by administering 11,36,980 doses.@CMofKarnataka @mla_sudhakar @hublimandi @Kalaburgivarthe @drmsbc @drmubl @DrmMys @Namducbpura @NammaBengaluroo @WFRising @DDChandanaNews @BelagaviKA @AIRBENGALURU1 @KarnatakaVarthe @PIBBengaluru pic.twitter.com/quE8Qmm310
— K'taka Health Dept (@DHFWKA) September 1, 2021
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿ “ಕೋವಿಡ್-19 ಲಸಿಕಾ ಮೇಳ”ದ ಅಂಗವಾಗಿ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡಲು ಪಾಲಿಕೆಯಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಇಂದು 1.30 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು.
1.83 Lakh Bengalureans vaccinated TODAY. Once again #BBMP achieves the steep target set (1.75 Lakh) in Vaccination Mela. 105% achieved, of the target set. Making Bengaluru safe.
— Special Commissioner Health, BBMP (@BBMPSplHealth) September 1, 2021
ಪೂರ್ಣ ಲಸಿಕೆ ಪಡೆದ ಬೆಂಗಳೂರು; ಸುರಕ್ಷಿತ ಬೆಂಗಳೂರು. pic.twitter.com/jiV05tFCAn
ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದು "ಕೋವಿಡ್-19 ಲಸಿಕಾ ಮೇಳ" ಹಮ್ಮಿಕೊಂಡು, ಲಸಿಕಾ ಕೇಂದ್ರಗಲ್ಲಿ ಲಸಿಕೆ ಪಡೆಯುತ್ತಿರುವ ಛಾಯಾಚಿತ್ರಗಳು.
— Special Commissioner Health, BBMP (@BBMPSplHealth) September 1, 2021
ಇದೇ ವೇಳೆ ಪಾಲಿಕೆ ವತಿಯಿಂದ ಹೆಚ್ಚು ಲಸಿಕೆ ಲಭ್ಯವಿದ್ದು, ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಲು ಮನವಿ.#BBMPVaccinationDrive @BBMPAdmn @BBMPCOMM @CMofKarnataka @DHFWKA pic.twitter.com/i8b6Zuw6FW
ಅದರಂತೆ ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ 492 ಸರ್ಕಾರಿ ಹಾಗೂ 313 ಖಾಸಗಿ ಸೇರಿದಂತೆ ಒಟ್ಟು 805 ಸೆಷನ್ ಸೈಟ್ ಗಳಲ್ಲಿ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ 1,62,332 ಮಂದಿಗೆ ಹಾಗೂ ಖಾಸಗಿಯಲ್ಲಿ 22,684 ಮಂದಿಗೆ ಸೇರಿದಂತೆ ಒಟ್ಟು 1,85,016 ಮಂದಿಗೆ ಇಂದು ಲಸಿಕೆ ನೀಡಲಾಗಿದೆ.