Home ಬೆಂಗಳೂರು ನಗರ ಬೆಂಗಳೂರಿನಲ್ಲಿ ಶ್ರೀಲಂಕಾದ ಅಂತಾರಾಷ್ಟ ಮಟ್ಟದ ಮೋಸ್ಟ್ ವಾಂಟೆಡ್​ ಕ್ರಿಮಿನಲ್​ಗಳ ಬಂಧನ

ಬೆಂಗಳೂರಿನಲ್ಲಿ ಶ್ರೀಲಂಕಾದ ಅಂತಾರಾಷ್ಟ ಮಟ್ಟದ ಮೋಸ್ಟ್ ವಾಂಟೆಡ್​ ಕ್ರಿಮಿನಲ್​ಗಳ ಬಂಧನ

24
0
Karnataka: Sri Lanka's most wanted criminals arrested in Bengaluru
Karnataka: Sri Lanka's most wanted criminals arrested in Bengaluru

ಬೆಂಗಳೂರು:

ಶ್ರೀಲಂಕಾದ ಮೋಸ್ಟ್​ ವಾಂಟೆಡ್ ಕ್ರಿಮಿನಲ್​ಗಳನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಮೂವರು ವಿದೇಶಿ ಅಪರಾಧಿಗಳು ಹಾಗೂ ಇವರಿಗೆ ಆಶ್ರಯ ನೀಡಿದ್ದವನನ್ನು ಅರೆಸ್ಟ್ ಮಾಡಿದೆ.

ಶ್ರೀಲಂಕಾದ ಕಾಸಿನ್ ಕುಮಾರ್, ಅಮಿಲಾ ನುವಾನ್, ರಂಗ ಪ್ರಸಾದ್ ಬಂಧಿತ ಆರೋಪಿಗಳು. ಇನ್ನು ಇವರಿಗೆ ಬೆಂಗಳೂರಿನಲ್ಲಿ ಆಶ್ರಯ ಜೈ ಪರಮೇಶ್ ಅಲಿಯಾಸ್ ಜಾಕ್​ ಎನ್ನುವಾತನನ್ನು ಸಹ ಬಂಧಿಸಲಾಗಿದೆ.

ಕೊಲೆ ಆರೋಪಿಯೂ ಆಗಿರುವ ಜೈ ಪರಮೇಶ್, ಯಲಹಂಕದ ವಿಶ್ವ ಪ್ರಕೃತಿ ಅಪಾರ್ಟ್​ಮೆಂಟ್​ನಲ್ಲಿ ಮೂವರು ಪಾತಕಿಗಳಿಗೆ ಆಶ್ರಯ ಕಲ್ಪಿಸಿದ್ದ. ಪಾತಕಿ ಕಾಸಿನ್ ಕುಮಾರ್ ವಿರುದ್ಧ ಶ್ರೀಲಂಕಾದಲ್ಲಿ 4 ಕೊಲೆ ಪ್ರಕರಣಗಳಿವೆ. ಮತ್ತೊಬ್ಬ ಅಮಿಲಾ ನುವಾನ್ ಮೇಲೆ 5 ಕೊಲೆ ಕೇಸ್​​ಗಳಿವೆ. ಇನ್ನು ರಂಗ ಪ್ರಸಾದ್ ವಿರುದ್ಧ ಹಲ್ಲೆ, ಕೊಲೆ ಕೇಸ್​ ಇರುವ ಬಗ್ಗೆ ಮಾಹಿತಿ ಇದೆ. ಇನ್ನು ಆರೋಪಿಗಳ ಬಳಿ 13 ಮೊಬೈಲ್​, ಶ್ರೀಲಂಕಾದ ವಿವಿಧ ವಿಸಿಟಿಂಗ್ ಕಾರ್ಡ್, ಬಸ್​ ಟಿಕೆಟ್​, ಪೇಪರ್​ ಕಟ್ಟಿಂಗ್ಸ್​​, ರೆಂಟಲ್​ ಅಗ್ರಿಮೆಂಟ್​ ಪ್ರತಿ, ಆಧಾರ್​ ಕಾರ್ಡ್​, ಚುನಾವಣಾ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ ಸಿಕ್ಕಿವೆ.

ಜಲಾನ್ ಎಂಬ ವ್ಯಕ್ತಿಯ ಆದೇಶದ ಮೇರೆಗೆ ಅಪಾರ್ಟ್ಮೆಂಟ್ ನಲ್ಲಿ ಅರೋಪಿಗಳು ವಾಸವಿದ್ದರು ಎನ್ನಲಾಗಿದ್ದು, ಸದ್ಯ ಜಲಾನ್ ಎಂಬಾತ ಓಮನ್ ದೇಶದಲ್ಲಿ ಅರೆಸ್ಟ್ ಆಗಿದ್ದಾನೆ. ಜಲಾನ್ ಶ್ರೀಲಂಕಾ, ಭಾರತ, ಪಾಕಿಸ್ತಾನಕ್ಕೆ ಲಿಂಕ್ ಹೊಂದಿದ್ದು, ಡ್ರಗ್ಸ್ ಟ್ರಾಫಿಕಿಂಕ್ ನಡೆಸುತಿದ್ದ ಎಂದು ತಿಳಿದುಬಂದಿದೆ. ಇನ್ನು ಶ್ರೀಲಂಕಾದ LTTE ಗೆ ಲಿಂಕ್ ಇರುವ ಬಗ್ಗೆ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಬಂಧಿತ ಲಂಕಾದ ಅರೋಪಿಗಳು ಎಲ್ ಟಿ ಟಿ ಇ ಗೆ ಸೇರಿದವರು ಇರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಸಿಸಿಬಿ ತನಿಖೆ ನಡೆಸಿದೆ.

ಅಷ್ಟಕ್ಕೂ ಈ ಶ್ರೀಲಂಕಾದ ಮೋಸ್ಟ್ ವಾಂಟೆಡ್‌ ಕ್ರಿಮಿನಲ್​ಗಳು ಭಾರತಕ್ಕೆ ಪ್ರವೇಶಿದ್ದೇ ರೋಚಕವಾಗಿದೆ. ಶ್ರೀಲಂಕಾದಿಂದ ಭಾರತಕ್ಕೆ ಬೋಟ್ ನಲ್ಲಿ ಆಗಮಿಸಿದ್ದು, ಬೋಟ್​ನಲ್ಲಿ ಕೋಸ್ಟ್ ಗಾರ್ಡ್ ಮತ್ತು ನೌಕಾಪಡೆಯ ಕಣ್ತಪ್ಪಿಸಿ ಭಾರತ ಪ್ರವೇಶಿಸಿದ್ದಾರೆ. ಚನ್ನೈ ಬಳಿಯ ಸಮುದ್ರ ತೀರಕ್ಕೆ ಬೋಟ್​​ನಲ್ಲಿ ಬಂದಿದ್ದು, ಬಳಿಕ ಅಲ್ಲಿಂದ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಬಂದಿಳಿದಿದ್ದರು. ಸದ್ಯದ ಮಾಹಿತಿ ಪ್ರಕಾರ ಕಳೆದ ಇಪ್ಪತ್ತು ದಿನಗಳ ಹಿಂದೆ ಶ್ರೀಲಂಕಾದಿಂದ ಭಾರತಕ್ಕೆ ಬಂದಿದ್ದರು ಎನ್ನಲಾಗಿದೆ.

ಸದ್ಯ ಅರೋಪಿಗಳ ವಿರುದ್ದ ಫಾರಿನ್ ಆಕ್ಟ್ 1946,(U/s -14,14(c) ಐಪಿಸಿ ಸೆಕ್ಷನ್​ 109,120B,212 ಅಡಿಯಲ್ಲಿ ಸಿಸಿಬಿ ಪ್ರಕರಣ ದಾಖಲಿಕೊಂಡಿದ್ದುಮ ತನಿಖೆ ಕೈಗೊಂಡಿದೆ.

LEAVE A REPLY

Please enter your comment!
Please enter your name here