ಬೆಂಗಳೂರು, ಮಾರ್ಚ್ 19(ಕರ್ನಾಟಕ ವಾರ್ತೆ): 2025ನೇ ಸಾಲಿನ ಕರ್ನಾಟಕ ಸ್ಟಾಂಪು ( ತಿದ್ದುಪಡಿ)ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭಾ ಅಧಿವೇಶನದಲ್ಲಿಂದು ಕೋರಿದರು.
ಈ ವಿಧೇಯಕದ ಉದ್ದೇಶ ಡಿಜಿಟಲ್ ಇ-ಸ್ಟಾಂಪಿಂಗ್ ನ್ನು ಕ್ರಮಬದ್ಧ ಸ್ಟಾಂಪಿನ ಪರಿಧಿಯೊಳಗೆ ತರಲು, ವಿದ್ಯುನ್ಮಾನ ಸಹಿಗಳಿಗೆ ಕಾನೂನಾತ್ಮಕ ಬೆಂಬಲವನ್ನು ನೀಡಲು ಮತ್ತು ವಿದ್ಯುನ್ಮಾನ ವಿಧಾನಗಳ ಮೂಲಕ ಸ್ಟಾಂಪು ಸುಂಕವನ್ನು ಸಾದ್ಯವಾಗಿಸಲು ಎಂದು ಸದನಕ್ಕೆ ಮಾಹಿತಿ ನೀಡಿದರು. ನಂತರ ವಿಧೇಯಕವನ್ನು ಅಂಗೀಕರಿಸಲಾಯಿತು.
