Home ಶಿಕ್ಷಣ Public Schools in Karnataka | ರಾಜ್ಯದಲ್ಲಿ 3 ಸಾವಿರ ಪಬ್ಲಿಕ್ ಶಾಲೆ ಆರಂಭಿಸಲು ನಿರ್ಧರ:...

Public Schools in Karnataka | ರಾಜ್ಯದಲ್ಲಿ 3 ಸಾವಿರ ಪಬ್ಲಿಕ್ ಶಾಲೆ ಆರಂಭಿಸಲು ನಿರ್ಧರ: ಸಚಿವ ಮಧು ಬಂಗಾರಪ್ಪ

34
0
Determined to give school children Ragi Malt: Madhu Bangarappa

ಬೆಂಗಳೂರು:

ರಾಜ್ಯದಲ್ಲಿ 3 ಸಾವಿರ ಪಬ್ಲಿಕ್ ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಎಲ್ಲಾ ಮಕ್ಕಳು ಶಿಕ್ಷಣ ಪಡೆಯಬೇಕು, ಸರ್ಕಾರಿ ಶಾಲೆಗಳಿಗೆ ಹೆಚ್ಚು ಬರಬೇಕು. ಹಾಗಾಗಿ, ರಾಜ್ಯದಲ್ಲಿ ಸುಮಾರು 3ಸಾವಿರ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದರು.

2024-25ರ ವೇಳೆಗೆ ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಹಾಗಾಗಿ, ಗ್ರಾಮಾಂತರ ಭಾಗದಲ್ಲಿ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಮೂರು ವರ್ಷದಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಹ ಒಪ್ಪಿಗೆ ಕೊಟ್ಟಿದ್ದಾರೆ. ಸಿಎಸ್​ಆರ್ ಯೋಜನೆಯಡಿ ಹಣ ಲಭ್ಯವಾಗಲಿದೆ. ಇದಕ್ಕೆ 600 ಕೋಟಿ ರೂಪಾಯಿ ಖರ್ಚು ಬರಬಹುದು. ಅಜೀಂ ಪ್ರೇಂಜಿ ಫೌಂಡೇಷನ್ ಕೂಡ ಮಾತುಕತೆ ನಡೆಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಸೌಲಭ್ಯ ಸಿಗಬಹುದು. ಮೂಲ ಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಸಿಗಬಹುದು ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕ ಪಬ್ಲಿಕ್ ಶಾಲೆಗಳ ಗುಣಮಟ್ಟ ಚೆನ್ನಾಗಿದೆ. ದೆಹಲಿಯಲ್ಲಿ ಇದು ವರ್ಕೌಟ್ ಆಗಿದೆ. ರಾಜ್ಯದಲ್ಲಿ ಎರಡು ಗ್ರಾಮ ಪಂಚಾಯಿತಿಗೆ ಒಂದು ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ 6 ಸಾವಿರ ಗ್ರಾಮ ಪಂಚಾಯಿತಿಗಳಿದ್ದು, ಕೆಲವೊಂದು ಕಡೆ ಕನ್ವರ್ಟ್ ಮಾಡುವ ಪ್ರಯತ್ನವಿದೆ. ಇರುವ ಶಾಲೆಗಳನ್ನ ಕನ್ವರ್ಟ್ ಮಾಡುವ ಚಿಂತನೆಯೂ ಇದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here