ವಿಜಯಪುರ:
ಬಿಜೆಪಿಯಿಂದ ತಮ್ಮ ತಂದೆ ವಿಜುಗೌಡ ಪಾಟೀಲ್ ಗೆ ಟಿಕೆಟ್ ಸಿಕ್ಕಿದ್ದಕ್ಕೆ ಪುತ್ರ ಸಮರ್ಥಗೌಡ ಪಿಸ್ತೂಲ್‌ನಿಂದ ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸಿ ವಿಚಿತ್ರವಾಗಿ ಸಂಭ್ರಮಿಸಿದ್ದರು. ಈ ವಿಡಿಯೋ ವೈರಲ್ ಆಗಿದೆ. ಇದನ್ನು ಸಂಗಮೇಶ ಪ್ರಶ್ನೆ ಮಾಡಿದ್ದಾರೆ. ಯಾವ ಆಧಾರದ ಮೇಲೆ ಇವರಿಗೆ ಟಿಕೆಟ್ ಕೊಟ್ಟಿದ್ದೀರಿ ಎಂದು ಬಿಜೆಪಿ ವರಿಷ್ಠರಿಗೆ ಕೆಪಿಸಿಸಿ ವಕ್ತಾರ ಸಂಗಮೇಶ ಬಬಲೇಶ್ವರ ಪ್ರಶ್ನೆ ಮಾಡಿದ್ದಾರೆ.
FIR has been registered and further legal action is being taken.
— alok kumar (@alokkumar6994) May 4, 2023
Initiating process of arms license cancellation too https://t.co/GaxV38Jfi4
ಬಿಜೆಪಿ ಗೂಂಡಾಗಳಿಗೆ ಟಿಕೆಟ್ ನೀಡಿದೆ ಎಂದು ಸಂಗಮೇಶ ಬಬಲೇಶ್ವರ ಆರೋಪ ಮಾಡಿದ್ದಾರೆ.ಈ ವಿಡಿಯೊವನ್ನು ವಿಜಯಪುರದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಅಲಗೂರು, ಮುಖಂಡ ಸಂಗಮೇಶ ಅವರು ಬಿಡುಗಡೆ ಮಾಡಿದ್ದಾರೆ.
Congress has released a video ,in which Samarth son of BJP Candidate Vijugowda Patil from Babaleshwar, is firing from a licensed gun ,celebrating announcement of his father's candidature on 12th April.Police have registered the FIR ..@alokkumar6994 @BJP4Karnataka @INCKarnataka pic.twitter.com/53eDvDzHkw
— Yasir Mushtaq (@path2shah) May 4, 2023
ಮಾಧ್ಯಮಗೋಷ್ಠಿ ಕರೆದು ಗುಂಡು ಹಾರಿಸಿದ ವಿಡಿಯೋ ತೋರಿಸಿದ್ದಾರೆ. ಬಬಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಗೂಂಡಾಗಿರಿ ನಡೆಯುತ್ತಿದೆ. ಇಂತಹವರು ಅಭ್ಯರ್ಥಿ ಆಗಿದ್ದಾರೆ. ಬಿಜೆಪಿಯ ಕೇಂದ್ರ ಸಚಿವ ಅಮಿತ್ ಶಾ ಹಾಗೂ ಇತರೆ ನಾಯಕರು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.