ಬೆಂಗಳೂರು:
ದೂರದ ಪ್ರದೇಶಗಳಲ್ಲೂ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಸುಲಲಿತವಾಗಿ ಸಿಗುವಂತಾಗಬೇಕು. ವೈದ್ಯಕೀಯ ಸೇವೆಗಳನ್ನ ವೇಗವಾಗಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಡಿಜಿಟಲ್ ತಂತ್ರಜ್ಞಾನಗಳ ಬಳಕೆ ಅವಶ್ಯಕವಾಗಿದೆ ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಇಂದು ನಾಸ್ಕಾಮ್ ಸೆಂಟರ್ ಆಫ್ ಎಕ್ಸಲೆನ್ಸ್ ಮತ್ತು ಲೈಫ್ ಸೈನ್ಸಸ್ ಮತ್ತು ಹೆಲ್ತ್‌ಕೇರ್ ಇನೋವೇಶನ್ ಫೋರಮ್ ಆಯೋಜಿಸಿದ್ದ ಹೆಲ್ತ್‌ಕೇರ್ ಇನೋವೇಶನ್ ಚಾಲೆಂಜಸ್ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಸಚಿವರು ಮಾತನಾಡುತ್ತಿದ್ದರು.
ಕರ್ನಾಟಕದ ಆರೋಗ್ಯ ರಕ್ಷಣೆಯು ಸರ್ಕಾರದ ಪ್ರಮುಖ ಕರ್ತವ್ಯಗಳು ಮತ್ತು ಜವಾಬ್ದಾರಿಗಳಲ್ಲಿಒಂದಾಗಿದ್ದು, ದೂರದ ಸ್ಥಳಗಳಲ್ಲಿ ವಾಸಿಸುವ ಜನರಿಗೆ ರೋಗಿಗಳ ಆರೈಕೆಗೆ ತ್ವರಿತವಾಗಿ ಆಗುವಂತೆ ವ್ಯವಸ್ಥೆ ಕಲ್ಪಿಸಬೇಕು.
ಬೆಂಗಳೂರು ದೇಶಕ್ಕೆ ಐಟಿ ಟೆಕ್ ಹಬ್. ಆದ್ದರಿಂದ ಕರ್ನಾಟಕವು ಆರೋಗ್ಯ ಸೇವೆಯಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನ ಬಳಕೆಗೆ ಹೆಚ್ಚು ಒತ್ತು ನೀಡಬೇಕು ಎಂದರು. ರಾಜ್ಯದಲ್ಲಿ ಉತ್ತಮ ಆರೋಗ್ಯ ನೀತಿಯನ್ನು ರಚಿಸುವುದಾಗಿ ಇದೇ ವೇಳೆ ದಿನೇಶ್ ಗುಂಡೂರಾವ್
ಕಾರ್ಯಕ್ರಮದಲ್ಲಿ ಹಲವು ಬಗೆಯ ಸ್ಟಾರ್ಟ್‌ಅಪ್‌ಗಳು ಆರೋಗ್ಯ ರಕ್ಷಣೆಯಲ್ಲಿ ವಿವಿಧ ಆವಿಷ್ಕಾರಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಕರ್ನಾಟಕ ಸರ್ಕಾರಗಳಿಂದ ತಮಗೆ ಸಿಗುತ್ತಿರುವ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಉದ್ಯಮಿಗಳು ತಂತ್ರಜ್ಞಾನಗಳಿಂದ ಆರೋಗ್ಯ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲು ಹಲವು ಅವಕಾಶಗಳಿವೆ ಎಂದರು.