ಪ್ರಾತಿನಿಧ್ಯ ಚಿತ್ರ
ಕಾರವಾರ: ಮಂಗನಕಾಯಿಲೆ ಗೆ ಒಂದೇ ದಿನ ಇಬ್ಬರು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಾಪುರ ತಾಲೂಕಿನಲ್ಲಿ ಜರುಗಿದೆ.
88 ವರ್ಷದ ವೃದ್ಧ ಮತ್ತು ಕಲ್ಲೂರು ಗ್ರಾಮದ 65 ವರ್ಷದ ವೃದ್ಧೆ ಮೃತರು. ಆ ಮೂಲಕ ಜಿಲ್ಲೆಯಲ್ಲಿ ಕೆಎಫ್ಡಿಯಿಂದ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆ ಆಗಿದೆ. ಸರಣಿ ಸಾವಿನಿಂದ ಸಿದ್ದಾಪುರ, ಶಿರಸಿ ತಾಲೂಕಿನಲ್ಲಿ ಆತಂಕ ಹೆಚ್ಚಿದೆ. ಸೂಕ್ತ ಲಸಿಕೆ ಇಲ್ಲದೆ ಆರೋಗ್ಯ ಇಲಾಖೆ ಅಧಿಕಾರಿಗಳು ಪರದಾಡುವಂತಾಗಿದೆ.
