ಧಾರವಾಡ;- ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳನ್ನು ಸಚಿವ ಸಂತೋಷ್ ಲಾಡ ತರಾಟೆಗೆ ತೆಗೆದುಕೊಂಡಿದ್ದಾರೆ.
ತೋಟಗಾರಿಕೆ ಇಲಾಖೆ ಡಿಡಿ ಕಾಶಿ ನಾಥ್ ಭದ್ರನ್ನವರ ಗೆ ಸಚಿವರು ಪುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ತೋಟಗಾರಿಗೆಯ ಇಲಾಖೆಯ ಯಾವುದೆ ಮಾಹಿತಿಯನ್ನ ಅಧಿಕಾರಿ ನೀಡಿಲ್ಲ. ಶಾಸಕರೆ ಕಾಲ್ ಮಾಡಿದರು ಸಂಪರ್ಕಕ್ಕೆ ಅಧಿಕಾರಿ ಸಿಗುತ್ತಿಲ್ಲ.
ನಾವು ಸಭೆಯ ಎಲ್ಲ ಮಾಹಿತಿಯನ್ನ ಓದಿಕ್ಕೊಂಡು ಬಂದಿರುತ್ತೆನೆ. ನೀವು ಜಲ್ಲೆಯ ಕಾಮಗಾರಿಗಳ ಬಗ್ಗೆ ಒಂದು ಮಾಹಿತಿ ಇರಲ್ಲ ಎಂದು ಸಚಿವ ಸಂತೋಷ್ ಲಾಡ ಗರಂ ಆಗಿದ್ದಾರೆ.
ಇದೇ ವೇಳೆ ಸಾಮಾಜಿಕ ಅರಣ್ಯ ಇಲಾಖೆ , ಕೃಷಿ ಇಲಾಖೆ, ತೋಟಗಾರಿಕೆಯ ಇಲಾಖೆಯ ಅಧಿಕಾರಿಗಳ ಮೆಲೊ ಗರಂ ಆಗಿದ್ದಾರೆ. ಸುಮ್ಮನೆ ಮೀಟಿಂಗ್ ಬಂದು ಟಿ ಕಾಪಿ ಕುಡಿಯಲಿಕ್ಕೆ ಬಂದಿದ್ದೀರಾ!? ಸರಕಾರದ ವೇತನ ಪಡಿತ್ತಿರಿ. ಆದರೂ ಪದೆ ಪದೆ ನಿಮಗೆ ಇದನ್ನೆ ಹೇಳೋದು ಆಗೇತಿ. ಯಾರು ಸರಿಯಾದ ಮಾಹಿತಿಯನ್ನ ನಿಡುತ್ತಿಲ್ಲ. ಬೇಸಿಕ್ ಇನ್ಪಾರ್ಮೆಶನ್ ಇಲ್ಲ, ಸಚಿವರು ಬೈದ್ರೆ ಸೊಕ್ಕಿನವರು ಅಂತಿರಿ, ಆದರೆ ನಾನು ಸಿಬಿಐ ವಿಚಾರಣೆ ಮಾಡಲಿಕ್ಕೆ ಬಂದಿಲ್ಲ ಎಂದರು.
ಕೆಡಿಪಿ ಸಭೆಯಲ್ಲಿ ಅಧಿಕಾರ ದಿವ್ಯ ನಿರ್ಲಕ್ಷಕ್ಕ ಕಾರಣದಿಂದ ಜಿಲ್ಲೆ ಅಭಿವೃದ್ದಿಯಾಗಲ್ಲ. ಯಾವ ಅಧಿಕಾರಿಗಳು ಸರಿಯಾದ ಡಾಟಾ ನೀಡುತ್ತಿಲ್ಲ ಎಂದ ಸಂತೋಷ್ ಲಾಡ ಬೇಸರ ಹೊರ ಹಾಕಿದರು.
The post KDP Meeting; ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಸಂತೋಷ್ ಲಾಡ್ appeared first on Ain Live News.