Home ಶಿಕ್ಷಣ ಎರಡು ಸಾವಿರ ಎಕರೆ ಪ್ರದೇಶದಲ್ಲಿ ಜ್ಞಾನ ನಗರ (Knowledge City): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಎರಡು ಸಾವಿರ ಎಕರೆ ಪ್ರದೇಶದಲ್ಲಿ ಜ್ಞಾನ ನಗರ (Knowledge City): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

70
0
Knowledge City to come up in two thousand acres: Chief Minister Basavaraj Bommai

ಬೆಂಗಳೂರು:

ಬೆಂಗಳೂರಿನ ಹತ್ತಿರ ಜ್ಞಾನ ನಗರ ನಿರ್ಮಾಣದ ಕನಸಿದ್ದು, ಅಂತರರಾಷ್ಟ್ರೀಯ ಮಟ್ಟದ ಉತ್ತಮ ವಿವಿಗಳು ಅಲ್ಲಿ ಬಂದು ನಮ್ಮ ವಿದ್ಯಾರ್ಥಿಗಳಿಗೆ ಅವಕಾಶ ದೊರೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಸೆಂಟ್ರಲ್ ಕಾಲೇಜಿನ ಜ್ಞಾನಭಾರತಿ ಸಭಾಂಗಣದಲ್ಲಿ ಆಯೋಜಿಸಿರುವ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ನವೀಕೃತ ಆವರಣವನ್ನು ಉದ್ಘಾಟಿಸಿ ಮಾತನಾಡಿದರು.

ಐಐಟಿ, ಹಾವರ್ಡ್ ವಿಶ್ವವಿದ್ಯಾಲಯಾಗಳು, ಇಲ್ಲಿ ಕಲಿತು ನಮ್ಮ ಮಕ್ಕಳ ಭವಿಷ್ಯ ಬರೆಯುವ ಒಕ್ಕಣಿಕೆ ಅವರ ಕೈಯಲ್ಲಿಯೇ ಇರಬೇಕು ಎಂದರು.

ಬೆಂಗಳೂರು ಶೈಕ್ಷಣಿಕ ಜಿಲ್ಲೆ ಬೆಂಗಳೂರು ವಿಶ್ವವಿದ್ಯಾಲಯದ ಭಾಗದಲ್ಲಿ ಆರು ಶೈಕ್ಷಣಿಕ ಸಂಸ್ಥೆಗಳು, ಡೀಮ್ಡ್ ವಿಶ್ವವಿದ್ಯಾಲಯಗಳಿವೆ. ಅದರ ಅಭಿವೃದ್ಧಿಗೆ ಹಣವನ್ನು ನೀಡಲಾಗುತ್ತಿದೆ. ಈ ಎಲ್ಲಾ ಸಂಸ್ಥೆಗಳೂ ಇದಕ್ಕೆ ಕೊಡುಗೆ ನೀಡಲಿವೆ. ಇಡೀ ವಿಶ್ವದಲ್ಲಿಯೇ ಒಂದೆಡೆ ಇಷ್ಟು ಶೈಕ್ಷಣಿಕ ಸಂಸ್ಥೆಗಳಿವೆ . ಅವೆಲ್ಲಕ್ಕೂ ಕೂಡ ಸಾಮಾನ್ಯ ಸೌಲಭ್ಯಗಳನ್ನು ಸೃಷ್ಟಿಸಬೇಕು ಮತ್ತು ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಲು ತೀರ್ಮಾನ ಮಾಡಲಾಗಿದೆ. ಇದನ್ನು ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗುತ್ತಿದು, ಇದು ಯಶಸ್ವಿಯಾದರೆ, ಶೈಕ್ಷಣಿಕ ಜಿಲ್ಲೆಗಳನ್ನು ಸೃಜಿಸಲಾಗುವುದು. ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲಿದೆ ಎಂದರು.

ರಾಜ್ಯದಲ್ಲಿ ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಿದ್ದು, ಇದಕ್ಕೆ ಅವಕಾಶವಿದೆ. ಮೂರು ವರ್ಷದಲ್ಲಿ 2 ಪದವಿ ಪಡೆಯಬಹುದು. ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ ಅವಕಾಶ, ನೆರವನ್ನು ನೀಡಲಾಗುತ್ತದೆ. ಮೂರು ವರ್ಷ ಸಂಶೋಧನೆ ಮಾಡಿ ಎನ್.ಇ. ಪಿ ಅನುಷ್ಠಾನ ಮಾಡಲಾಗಿದೆ. ಕರ್ನಾಟಕ ಇದನ್ನು ಅನುಷ್ಠಾನ ಮಾಡಿದ ಮೊದಲ ರಾಜ್ಯ. ಹತ್ತಿರದ ಎಲ್ಲಾ ಸಂಸ್ಥೆಗಳ ವಿದ್ಯಾರ್ಥಿ ಯಾಗಬಹುದು ಎಂದರು.

ಉನ್ನತ ಶಿಕ್ಷಣ ಸಚಿವ ಡಾ: ಸಿ.ಎನ್. ಅಶ್ವತ್ಥ್ ನಾರಾಯಣ್, ಸಚಿವ ಪ್ರಭು ಚೌಹಾಣ್, ಬೆಂಗಳೂರು ನಗರ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here