Home Uncategorized Kolar: ಇಂಗ್ಲೀಷ್ ಭಾಷೆಯಲ್ಲಿ 6 ವರ್ಲ್ಡ್ ರೆಕಾರ್ಡ್ ಮಾಡಿದ ಬಡ ಡ್ರೈವರ್ ಮಗ..!

Kolar: ಇಂಗ್ಲೀಷ್ ಭಾಷೆಯಲ್ಲಿ 6 ವರ್ಲ್ಡ್ ರೆಕಾರ್ಡ್ ಮಾಡಿದ ಬಡ ಡ್ರೈವರ್ ಮಗ..!

22
0

ಕೋಲಾರ: ಗ್ರಾಮಾಂತರ   ಮಕ್ಕಳಿಗೆ ಇಂಗ್ಲಿಷ್ ಭಾಷೆಯ ಕಲಿಕೆಯೇ ಒಂದು ದೊಡ್ಡ ಸಮಸ್ಯೆಯಾಗಿರುತ್ತದೆ. ಉನ್ನತ ವಿದ್ಯಾಭ್ಯಾಸ ಮಾಡುವಾಗಲೋ ಅಥವಾ ಕೆಲಸಕ್ಕೆ ಸೇರಿಕೊಂಡಾಗಲೋ ಇಂಗ್ಲಿಷ್ ಭಾಷೆ‌ಯ ಸಮಸ್ಯೆ . ಆದ್ರೆ ಇಲ್ಲೊಬ್ಬ ಗಡಿ ಭಾಗದ ಹಳ್ಳಿಯ ಟೆಂಪೋ ಚಾಲಕನ ಮಗ 22ನೇ ವಯಸ್ಸಿಗೇ ಇಂಗ್ಲಿಷ್ ಭಾಷೆಯಲ್ಲಿ ಬರೋಬ್ಬರಿ 6 ವಿಶ್ವದಾಖಲೆಯನ್ನು ಮಾಡಿದ್ದಾರೆ.  ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಗಡಿಯಲ್ಲಿರುವ ರಾಯಸಂದ್ರ ಗ್ರಾಮದ ಟೆಂಪೋ ಚಾಲಕ ಕೃಷ್ಣಶೆಟ್ಟಿ ಹಾಗೂ ನೇತ್ರಾವತಿ ದಂಪತಿಯ ಮಗ ಗೋವರ್ಧನ್ ಎಂಬ ಯುವಕ,

  ಇಂಗ್ಲಿಷ್ ಭಾಷೆಯಲ್ಲಿ 6 ವಿಶ್ವದಾಖಲೆ ಮಾಡಿರುವ  ಗ್ರಾಮೀಣ ಯುವಕ 1 ರಿಂದ 12ನೇ ತರಗತಿವರೆಗೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಗೋವರ್ಧನ್ ವಿದ್ಯಾಭ್ಯಾಸ ಮಾಡಿದ್ದಾರೆ. ನಂತರ ಮಾಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಬಿಕಾಂ ಪದವಿ ಮಾಡಿರುವ ಗೋವರ್ಧನ್, ಮೊದಮೊದಲು ಇಂಗ್ಲಿಷ್ ಭಾಷೆಯನ್ನು ಕಲಿಯಲು ಪರದಾಡಿದ್ದಾರೆ. ನಂತರ ಇಂಗ್ಲಿಷ್ ಭಾಷೆಯನ್ನು ಕಲಿಯಲೇ ಬೇಕೆಂದು  ಹಲವಾರು ಕೋಚಿಂಗ್ ಸೆಂಟರ್ ಗಳಲ್ಲಿ ತರಬೇತಿ ಪಡೆದಿದ್ದಾರೆ. ಹಗಲು ರಾತ್ರಿ  ಎನ್ನದೆ ಕಷ್ಟಪಟ್ಟು ಇಂಗ್ಲೀಷ್  ಭಾಷೆಯಲ್ಲಿಯೇ ವಿಶ್ವ ದಾಖಲೆ ಮಾಡಿದ್ದಾರೆ.

7 ಸಾವಿರ ಇಂಗ್ಲಿಷ್ ವ್ಯಾಕರಣದ ಸೂತ್ರ ಬರೆದು ವಿಶ್ವದಾಖಲೆ:

ಇಂಗ್ಲಿಷ್ ವ್ಯಾಕರಣದಲ್ಲಿ ಸೂತ್ರಗಳನ್ನು ಬಳಸಿಕೊಂಡು 7 ಸಾವಿರ ವ್ಯಾಕರಣಗಳನ್ನು ಕೇವಲ 4 ಗಂಟೆ 58 ನಿಮಿಷ 2 ಸೆಕೆಂಡ್ ಗಳಲ್ಲಿ ಬರೆದ  ಗೋವರ್ಧನ್ ವಿಶ್ವ ದಾಖಲೆ ಮಾಡಿದ್ದಾರೆ. ಈ ಹಿಂದೆ 5 ಗಂಟೆ 38 ನಿಮಿಷ 6 ಸೆಕೆಂಡ್ ಗಳಲ್ಲಿ 5 ಸಾವಿರ ಇಂಗ್ಲಿಷ್ ವ್ಯಾಕರಣ ಸೂತ್ರಗಳು ವರ್ಲ್ಡ್ ರೆಕಾರ್ಡ್ ಆಗಿತ್ತು. ಹಳೆಯ ದಾಖಲೆಗಳನ್ನು ಇವರು ಬ್ರೇಕ್ ಮಾಡಿದ್ದಾರೆ. ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್, ಕಲಾಂಸ್ ಬುಕ್ ಆಫ್ ರೆಕಾರ್ಡ್‌, ಹೈರೇಂಜ್ ಬುಕ್ ಆಫ್ ರೆಕಾರ್ಡ್, ಎಕ್ಸ್ ಕ್ಲ್ಯೂಸಿವ್ ಬುಕ್ ಆಫ್ ರೆಕಾರ್ಡ್, ಕಿಂಗ್ಸ್ ಬುಕ್ ಆಫ್ ರೆಕಾರ್ಡ್ ಹಾಗೂ ಇತ್ತೀಚೆಗೆ ಅಮೆರಿಕನ್ ಬುಕ್ ಆಫ್ ರೆಕಾರ್ಡ್ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ.

ಗ್ರಾಮೀಣ ಭಾಗದ ಕನ್ನಡ ಮಾಧ್ಯಮದಲ್ಲಿ ಓದಿರುವ ನನಗೆ ಇಂಗ್ಲಿಷ್ ಕಲಿಯುವುದು ಎಷ್ಟು ಕಷ್ಟವಾಗಿರುತ್ತದೆ ಎಂಬುದು ತಿಳಿದಿದೆ. ಛಲತೊಟ್ಟು ಇಂಗ್ಲಿಷ್ ಕಲಿತ ನಾನು ಬೇರೆ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿ ಎಂದು ಉಚಿತವಾಗಿ ಇಂಗ್ಲಿಷ್ ಬೋಧನೆ ಮಾಡುತ್ತಿದ್ದೇನೆ. ಇಂಗ್ಲಿಷ್ ನಲ್ಲಿ ವಿಶ್ವ ದಾಖಲೆ ಮಾಡಿರುವುದು ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಗೋವರ್ಧನ್ ಹರ್ಷ‌ ಹೇಳಿದರು.

ಅಲ್ಲದೆ ಇಂಜಿನಿಯರ್ಸ್, ಡಾಕ್ಟರ್ಸ್, ಬ್ಯಾಂಕ್ ಸಿಬ್ಬಂದಿ, ಲಾಯರ್ಸ್, ಟೀಚರ್ಸ್ ಸೇರಿದಂತೆ  5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭೋದನೆ ಮಾಡಿದ್ದಾರೆ. ತಾನು ಓದಿದ ಮಾಲೂರಿನ ಸರ್ಕಾರಿ ಪದವಿ ಕಾಲೇಜಿನ 130 ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಗ್ಲಿಷ್ ಹೇಳಿಕೊಡುತ್ತಿದ್ದಾರೆ. ಅಂದಹಾಗೆ 22ನೇ ವಯಸ್ಸಿಗೆ 6 ವಿಶ್ವದಾಖಲೆ ಮಾಡಿರುವ ಗೋವರ್ಧನ್ ಅವರು ಸದ್ಯ ಮಾಲೂರಿನಲ್ಲಿ ಖಾಕಿ ಅಕಾಡೆಮಿ ಎಂಬ ಸ್ಪೋಕನ್ ಇಂಗ್ಲಿಷ್ ಕ್ಲಾಸ್ ನಡೆಸುತ್ತಿದ್ದಾರೆ. ಮುಂದೆ IAS ಆಗುವ ಕನಸನ್ನು  ಹೊಂದಿದ್ದಾರೆ. ಯುಪಿಎಸ್ ಸಿ ಪರೀಕ್ಷೆಗೂ ಸಹ  ತಯಾರಾಗುತ್ತಿದ್ದಾರೆ.

The post Kolar: ಇಂಗ್ಲೀಷ್ ಭಾಷೆಯಲ್ಲಿ 6 ವರ್ಲ್ಡ್ ರೆಕಾರ್ಡ್ ಮಾಡಿದ ಬಡ ಡ್ರೈವರ್ ಮಗ..! appeared first on Ain Live News.

LEAVE A REPLY

Please enter your comment!
Please enter your name here